ADVERTISEMENT

ಚೀನಾ ಪ್ರವಾಸಕ್ಕೂ ಮುನ್ನ ಹೊಸ ಕ್ಷಿಪಣಿ ಪರಿಶೀಲಿಸಿದ ಕೊರಿಯಾ ಸರ್ವಾಧಿಕಾರಿ

ಏಜೆನ್ಸೀಸ್
Published 1 ಸೆಪ್ಟೆಂಬರ್ 2025, 3:49 IST
Last Updated 1 ಸೆಪ್ಟೆಂಬರ್ 2025, 3:49 IST
   

ಸಿಯೋಲ್: ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಸೇನಾ ರ‍್ಯಾಲಿಗೆ ತೆರಳುವ ಮೊದಲು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ದೇಶದ ಹೊಸ ಕ್ಷಿಪಣಿ ಉತ್ಪಾದಕ ಘಟಕಕ್ಕೆ ಭೇಟಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಜಾಂಗ್ ಉನ್ ಅವರು ಪ್ರಮುಖ ಯುದ್ಧ ಸಾಮಗ್ರಿ ತಯಾರಿಸುವ ಕಾರ್ಖಾನೆಗಳಿಗೆ ಭಾನುವಾರ ಭೇಟಿ ನೀಡಿದ್ದಾರೆ.

‘ಕ್ಷಿಪಣಿ ಉತ್ಪಾದನೆ ಮಾಡುವುದಕ್ಕಾಗಿ ಮೂರು ದೀರ್ಘಕಾಲೀನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗಿದೆ’ ಎಂದು ಕಿಮ್‌ ಹೇಳಿದ್ದಾರೆ.

ADVERTISEMENT

ಉತ್ತರ ಕೊರಿಯಾವು ಸೇನಾ ತುಕಡಿಯ ಜತೆಗೆ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ರಪ್ತು ಮಾಡುತ್ತಿದೆ. ಉಕ್ರೇನ್‌ ವಿರುದ್ಧದ ಯುದ್ದದಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಕೊರಿಯಾವು ಆರೋಪಿಸಿದೆ.

ಎರಡನೇ ಮಹಾಯುದ್ಧದ ನಂತರ ಬೀಜಿಂಗ್‌ನಲ್ಲಿ ದೊಡ್ಡ ಮಟ್ಟದ ಸೇನಾ ರ‍್ಯಾಲಿ ನಡೆಯಲಿದೆ. ಚೀನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್, ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಲಿದ್ದಾರೆ. ಇದು ಕಿಮ್‌ ಅವರ ಮೊದಲ ಬಹುಪಕ್ಷೀಯ ಅಂತರರಾಷ್ಟ್ರೀಯ ಸಭೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.