ADVERTISEMENT

ಚೀನಾದ 30 ಲಕ್ಷ ಡೋಸ್ ಕೋವಿಡ್ ಲಸಿಕೆ ತಿರಸ್ಕರಿಸಿದ ಉತ್ತರ ಕೊರಿಯಾ

ರಾಯಿಟರ್ಸ್
Published 2 ಸೆಪ್ಟೆಂಬರ್ 2021, 3:20 IST
Last Updated 2 ಸೆಪ್ಟೆಂಬರ್ 2021, 3:20 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಉತ್ತರ ಕೊರಿಯಾ: ಚೀನಾದ ಸಿನೋವ್ಯಾಕ್ ಬಯೋಟೆಕ್‌ನ ಸುಮಾರು 30 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಉತ್ತರ ಕೊರಿಯಾ ತಿರಸ್ಕರಿಸಿದೆ. ಅಲ್ಲದೆ ಅವುಗಳನ್ನು ತೀವ್ರ ಬಾಧಿತ ಪ್ರದೇಶಗಳಿಗೆ ರವಾನಿಸಬೇಕು ಎಂದು ಸಲಹೆ ಮಾಡಿರುವುದಾಗಿ ಯುನಿಸೆಫ್ ಹೇಳಿದೆ.

ಇಲ್ಲಿಯವರೆಗೆ ಉತ್ತರ ಕೊರಿಯಾದಲ್ಲಿ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗಿಲ್ಲ. ಅಲ್ಲದೆ ಕೋವಿಡ್ ನಿಯಂತ್ರಿಸಲು ಗಡಿ ಮುಚ್ಚುವುದು ಸೇರಿದಂತೆ ಕಠಿಣ ಪ್ರಯಾಣ ನಿರ್ಬಂಧಗಳನ್ನು ಹೇರಿದೆ.

ವಿಶ್ವಸಂಸ್ಥೆ ಏಜೆನ್ಸಿಯ ವಕ್ತಾರರ ಪ್ರಕಾರ 'ಕೋವ್ಯಾಕ್ಸ್‌' ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಹಿಂದುಳಿದ ರಾಷ್ಟ್ರಗಳಿಗೂ ಲಸಿಕೆಯನ್ನು ಪೂರೈಸಲಾಗುತ್ತಿದೆ.

ಜುಲೈನಲ್ಲಿ ಉತ್ತರ ಕೊರಿಯಾವು ಅಡ್ಡ ಪರಿಣಾಮದ ಭೀತಿಯ ಹಿನ್ನೆಲೆಯಲ್ಲಿ ಆಸ್ಟ್ರಾಜೆನೆಕಾ ಲಸಿಕೆಯನ್ನು ನಿರಾಕರಿಸಿತ್ತು.

ಇನ್‌ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಸೆಕ್ಯೂರಿಟಿ ಪ್ರಕಾರ, ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬ ಕಾರಣಕ್ಕೆ ಚೀನಾದ ಲಸಿಕೆ ಮೇಲೆ ಉತ್ತರ ಕೊರಿಯಾವು ಹೆಚ್ಚಿನ ಆಸಕ್ತಿ ತೋರಿಲ್ಲ. ಅದೇ ಹೊತ್ತಿಗೆ ರಷ್ಯಾದ ಲಸಿಕೆಯತ್ತ ಆಸಕ್ತಿ ಹೊಂದಿದೆ ಎಂದಿದೆ.

ಚೀನಾದ ಸಿನೋವ್ಯಾಕ್ ಡೋಸ್ ಪಡೆದ ಥಾಯ್ಲೆಂಡ್, ಉರುಗ್ವೆಯಂತಹ ಹಲವಾರು ದೇಶಗಳು ಈಗಾಗಲೇ ಬೇರೆ ಲಸಿಕೆಗಳನ್ನು ಬಳಸಲು ಪ್ರಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.