ADVERTISEMENT

ಫಿಲಿಪ್ಪೀನ್ಸ್‌: ದೊಕ್ಸುರಿ ಚಂಡಮಾರುತಕ್ಕೆ ಇಬ್ಬರು ಬಲಿ

ಎಎಫ್‌ಪಿ
Published 26 ಜುಲೈ 2023, 15:15 IST
Last Updated 26 ಜುಲೈ 2023, 15:15 IST
   

ಮನಿಲಾ: ಉತ್ತರ ಫಿಲಿಪೀನ್ಸ್‌ಗೆ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತ  ‘ದೊಕ್ಸುರಿ’ ಗೆ ಇಬ್ಬರು ಬಲಿಯಾಗಿದ್ದಾರೆ. ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಅಲ್ಲದೆ ಸಾವಿರಾರು ಜನರು ಆಶ್ರಯ ಕಳೆದುಕೊಂಡಿದ್ದು, ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಇಸಾಬೆಲಾ ಉತ್ತರ ಪ್ರಾಂತ್ಯದ ರಾಮನ್ ಪುರಸಭೆಯಲ್ಲಿ ಬುಧವಾರ ಚಂಡಮಾರುತದ ಗಾಳಿಗೆ ತೆಂಗಿನ ಮರ ಬಿದ್ದು ಸೈಕಲ್‌ನಲ್ಲಿ ಬ್ರೆಡ್ ಮಾರುತ್ತಿದ್ದ ಮಹಿಳೆ ಮೃತರಾಗಿದ್ದಾರೆ. ಬಾಗುಯೋ ನಗರದಲ್ಲಿ ಮನೆಯ ಮೇಲೆ ಬೆಟ್ಟ ಕುಸಿದಿದ್ದರಿಂದ 17 ವರ್ಷದ ಯುವಕ ಮೃತನಾಗಿದ್ದಾನೆ ಎಂದು ಪ್ರಾಂತೀಯ ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಗಂಟೆಗೆ 175 ಕಿ.ಮೀ ವೇಗ ಪಡೆದುಕೊಂಡಿರುವ ಚಂಡಮಾರುತ ಬುಧವಾರ ದಲುಪಿರಿ, ಫೂಗಾ ಮತ್ತು ಲುಜೋನ್ ದ್ವೀಪಗಳಿಗೆ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ‌ ತಿಳಿಸಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.