ADVERTISEMENT

ಸಲಿಂಗಿ ಎಂದು ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್ ಹೆಂಡ್ರಿಕ್ಸ್‌ ಹತ್ಯೆ

ಏಜೆನ್ಸೀಸ್
Published 16 ಫೆಬ್ರುವರಿ 2025, 6:34 IST
Last Updated 16 ಫೆಬ್ರುವರಿ 2025, 6:34 IST
<div class="paragraphs"><p>ಮುಹ್ಸಿನ್‌ ಹೆಂಡ್ರಿಕ್ಸ್‌</p></div>

ಮುಹ್ಸಿನ್‌ ಹೆಂಡ್ರಿಕ್ಸ್‌

   

ಜೋಹಾನ್ಸ್‌ಬರ್ಗ್‌: ‘ತಾನು ಸಲಿಂಗಿ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್, ಮುಹ್ಸಿನ್‌ ಹೆಂಡ್ರಿಕ್ಸ್‌ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಗ್ಕೆಬರ್ಹಾ ನಗರದಲ್ಲಿ ಘಟನೆ ನಡೆದಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಲಿಂಗಿ ಮುಸ್ಲಿಮರಿಗೆ ನಿರ್ಮಿಸಿದ್ದ ಸುರಕ್ಷಿತ ತಾಣಕ್ಕೆ ಹೆಂಡ್ರಿಕ್ಸ್‌ ಚಾಲಕನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಸುಕುಧಾರಿ ವ್ಯಕ್ತಿಗಳು ಕಾರನ್ನು ಅಡ್ಡ ಹಾಕಿದ್ದಾರೆ. ಬಳಿಕ ಹೆಂಡ್ರಿಕ್ಸ್‌ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೂರ್ವ ಕೇಪ್ ಫೋರ್ಸ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ADVERTISEMENT

ಕೊಲೆಗೆ ಕಾರಣ ನಿಗೂಢವಾಗಿದೆ. ತನಿಖೆಯನ್ನು ಆರಂಭಿಸಲಾಗಿದೆ. ಯಾರಿಗಾದರೂ ಘಟನೆಯ ಬಗ್ಗೆ ಮಾಹಿತಿ ತಿಳಿದಿದ್ದರೆ ಧೈರ್ಯವಾಗಿ ಮುಂದೆ ಬಂದು ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

1996ರಲ್ಲಿ ತನ್ನನ್ನು ಸಲಿಂಗಿ ಎಂದು ಹೆಂಡ್ರಿಕ್ಸ್‌ ಘೋಷಿಸಿಕೊಂಡಿದ್ದರು, ಆ ಬಳಿಕ ಅವರು ಎಲ್‌ಜಿಬಿಟಿಕ್ಯೂ ಪರ ವಕಾಲತ್ತು ವಹಿಸುತ್ತಿದ್ದರು. 2022 ರಲ್ಲಿ ‘ದಿ ರಾಡಿಕಲ್’ ಎಂಬ ಸಾಕ್ಷ್ಯ ಚಿತ್ರದಲ್ಲಿ ಹೆಂಡ್ರಿಕ್ಸ್‌ ಕಾಣಿಸಿಕೊಂಡಿದ್ದರು. ಬಳಿಕ ತನ್ನ ವಿರುದ್ಧ ಬೆದರಿಕೆಗಳಿವೆ ಎಂದಿದ್ದರು. ‘ಸಾವಿಗೆ ಹೆದರುವುದ‌ಕ್ಕಿಂತ ಧೈರ್ಯದಿಂದ ಜೀವಿಸುವುದು ಮುಖ್ಯ’ ಎಂದು ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.