ADVERTISEMENT

ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಬ್ರಿಟನ್‌ನಲ್ಲಿ 100ಕ್ಕೂ ಹೆಚ್ಚು ಜನರ ಬಂಧನ

ಏಜೆನ್ಸೀಸ್
Published 14 ಜೂನ್ 2020, 1:55 IST
Last Updated 14 ಜೂನ್ 2020, 1:55 IST
ಪ್ರತಿಭಟನೆಯ ಪ್ರಾತಿನಿಧಿಕ ಚಿತ್ರ
ಪ್ರತಿಭಟನೆಯ ಪ್ರಾತಿನಿಧಿಕ ಚಿತ್ರ   

ಲಂಡನ್‌: ಪೊಲೀಸ್‌ ಕ್ರೌರ್ಯದಿಂದ ಅಮೆರಿಕದಲ್ಲಿ ಮೃತಪಟ್ಟ ಜಾರ್ಜ್‌ ಫ್ಲಾಯ್ಡ್‌ ಸಾವು ಖಂಡಿಸಿ ಬ್ರಿಟನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಲಂಡನ್‌ನಲ್ಲಿ ಪೊಲೀಸರುಪ್ರತಿಭಟನೆಗೆ ಅವಕಾಶ ನೀಡದಿದ್ದರೂಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಗುಂಪು ಚದುರಿಸಲು ಮುಂದಾದ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ಮಾಡುತ್ತಿದ್ದ ಕೆಲವರು ಮಾರಕಾಸ್ತ್ರಗಳು, ಡ್ರಗ್ಸ್‌ ಸಹ ಹೊಂದಿದ್ದರು ಎಂದು ಲಂಡನ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರತಿಭಟನೆ ನಡೆಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ನಾಗರಿಕರಲ್ಲಿ ಪ್ರತಿಭಟನೆ ನಡೆಸದಿರುವಂತೆ ಹಾಗೂ ಗುಂಪು ಸೇರದಿರುವಂತೆ ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಪಟೇಲ್‌ ಮನವಿ ಮಾಡಿದ್ದರು.

‘ನಾವು ಆರೋಗ್ಯ ತುರ್ತ ಪರಿಸ್ಥಿತಿಯಲ್ಲಿ ಇದ್ದೇವೆ, ಇದು ಪ್ರತಿಭಟನೆ ಮಾಡುವ ಸಂದರ್ಭವಲ್ಲ, ದಯಮಾಡಿ ನಾಗರಿಕರು ಪೊಲೀಸರ ಮನವಿಗೆ ಸ್ಪಂದಿಸಬೇಕು’ಎಂದು ಪ್ರೀತಿ ಪಟೇಲ್ ಮನವಿಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.