ADVERTISEMENT

ಕ್ರಿಸ್‌ಮಸ್‌ ವೇಳೆಗೆ ಕೋವಿಡ್‌ ಲಸಿಕೆ ಕೊನೆ ಹಂತದ ಪ್ರಯೋಗದ ವರದಿ ನಿರಿಕ್ಷೆ

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ತಜ್ಞರ ಅಭಿಮತ

ಏಜೆನ್ಸೀಸ್
Published 20 ನವೆಂಬರ್ 2020, 8:01 IST
Last Updated 20 ನವೆಂಬರ್ 2020, 8:01 IST
   

ಲಂಡನ್‌: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಡ್‌ 19 ಲಸಿಕೆಯ ಕೊನೆ ಹಂತದ ಕ್ಲಿನಿಕಲ್ ಟ್ರಯಲ್‌ಗಳು ಮುಗಿದಿದ್ದು, ವಿವಿಯ ವಿಜ್ಞಾನಿಗಳು ಇದೇ ಕ್ರಿಸ್‌ಮಸ್‌ ವೇಳೆಗೆ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದಾರೆ.

ಲಸಿಕೆ ಅಭಿವೃದ್ಧಿಪಡಿಸಿರುವ ತಂಡದ ಸದಸ್ಯರೊಂದಿಗೆ ನಡೆದ ಚರ್ಚೆ ಪ್ರಕಾರ, ಶೀಘ್ರದಲ್ಲೇ ಕೊನೆ ಹಂತದ ಕ್ಲಿನಿಕಲ್ ಟ್ರಯಲ್ ಫಲಿತಾಂಶಗಳು ಲಭ್ಯವಾಗುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಮಕ್ಕಳ ವಿಭಾಗದ ಸೋಂಕು ಮತ್ತು ರೋಗ ನಿರೋಧಕ ತಜ್ಞ ಡಾ. ಆಂಡ್ರ್ಯೂ ಪೊಲ್ಲಾರ್ಡ್‌, ‘ಬೇಸಿಗೆ ವೇಳೆಗೆ ಸೋಂಕಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ, ಈಗ ಮೂರನೇ ಹಂತದ ಪ್ರಯೋಗಗಳು ನಡೆದು, ಹೊಸ ದತ್ತಾಂಶಗಳ ಸಂಗ್ರಹಿಸಲಾಗುತ್ತಿದ್ದು, ವಿಶ್ವದ ಬೇರೆ ಭಾಗಗಳಲ್ಲಿ ಸಾಂಕ್ರಾಮಿಕ ರೋಗದ ಹೊಸ ಅಲೆಯೂ ಆರಂಭವಾಗಿದೆ.

‘ಮೂರನೆಯ ಹಂತದ ಕ್ಲಿನಿಕಲ್ ಟ್ರಯಲ್ ಪ್ರಗತಿಯನ್ನು ಗಮನಿಸಿದರೆ, ನಾವು ಕ್ರಿಸ್‌ಮಸ್‌ಗೆ ಮುಂಚಿತವಾಗಿಯೇ, ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ‘ ಎಂದು ಪೊಲಾರ್ಡ್‌ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಲಸಿಕೆ ತಯಾರಿಕಾ ಕಂಪನಿಗಳಾದ ಫೈಜರ್‌ ಮತ್ತು ಮಾಡರ್ನಾ, ಈ ವಾರ ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್‌ಗಳ ಪ್ರಾಥಮಿಕ ಫಲಿತಾಂಶಗಳನ್ನು ಸಂಗ್ರಹಿಸಿವೆ. ಈ ವರದಿ ಪ್ರಕಾರ ಕೋವಿಡ್‌19 ಲಸಿಕೆಗಳು ಶೇ 95ರಷ್ಟು ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.