ADVERTISEMENT

ಲಕ್ಷಣರಹಿತ ಸೋಂಕಿತರ ಪತ್ತೆಗಾಗಿ ಆಕ್ಸ್‌ಫರ್ಡ್‌ ವಿವಿಯಿಂದ ಹೊಸ ರೀತಿಯ ಪರೀಕ್ಷೆ

ಏಜೆನ್ಸೀಸ್
Published 30 ಅಕ್ಟೋಬರ್ 2020, 12:44 IST
Last Updated 30 ಅಕ್ಟೋಬರ್ 2020, 12:44 IST
ಸರ್ಬಿಯಾದ ಬೆಲ್‌ಗ್ರಾಡ್‌ ಎಂಬಲ್ಲಿ ನಡೆಯುತ್ತಿದ್ದ ಸೋಂಕು ಪತ್ತೆ ಪರೀಕ್ಷೆ (ರಾಯಿಟರ್ಸ್‌)
ಸರ್ಬಿಯಾದ ಬೆಲ್‌ಗ್ರಾಡ್‌ ಎಂಬಲ್ಲಿ ನಡೆಯುತ್ತಿದ್ದ ಸೋಂಕು ಪತ್ತೆ ಪರೀಕ್ಷೆ (ರಾಯಿಟರ್ಸ್‌)   

ಲಂಡನ್‌: ಕರೋನಾ ವೈರಸ್‌ನ ಲಕ್ಷಣರಹಿತ ಸೋಂಕಿತರನ್ನು ಗುರುತಿಸುವ ಸಲುವಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹೊಸ ಬಗೆಯ ಪರೀಕ್ಷಾ ತಂತ್ರಜ್ಞಾನವನ್ನು ಪ್ರಯೋಗಿಸಲಿದೆ.

ಮುಂದಿನ ಕೆಲವು ವಾರಗಳಲ್ಲಿ ಬ್ರಿಟನ್‌ನಾದ್ಯಂತ ಹೊಸ ತಂತ್ರಜ್ಞಾನದ ಪ್ರಯೋಗ ನಡೆಯಲಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆ ಫಲಿತಾಂಸವೂ ಕೆಲವೇ ನಿಮಿಷಗಳಲ್ಲಿ ಲಭ್ಯವಾಗಲಿದೆ.

ವಿಶ್ವವಿದ್ಯಾಲಯದ ಕೆಲವು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನದ ಭಾಗವಾಗಿ ಪರೀಕ್ಷಾ ಸಾಧನಗಳನ್ನು ನೀಡಲಾಗುವುದು. ಪರೀಕ್ಷೆ ನಡೆಸುವುದು ಹೇಗೆ ಮತ್ತು ಆ್ಯಪ್‌ ಬಳಸಿ ಅದನ್ನು ದಾಖಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಔಷಧ ತಯಾರಕಾ ಸಂಸ್ಥೆ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಸಂಭಾವ್ಯ ಲಸಿಕೆಗಾಗಿ ಕೆಲಸ ಮಾಡುತ್ತಿರುವ ಆಕ್ಸ್‌ಫರ್ಡ್ ವಿವಿಯು, ಬ್ರಿಟನ್‌ನ ಆರೋಗ್ಯ ಇಲಾಖೆ, ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ ಮತ್ತು ಡರ್ಹಾಮ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ರಾಯೋಗಿಕ ಪರೀಕ್ಷಾ ಕಾರ್ಯಕ್ರಮವನ್ನು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.