ADVERTISEMENT

ಭಾರತದೊಂದಿಗೆ US ಇದೆ, ಅಷ್ಟೇ: ಪಾಕ್‌ ಪತ್ರಕರ್ತನ ಪ್ರಶ್ನೆಗೆ ಟಾಮಿ ಬ್ರೂಸ್ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2025, 8:52 IST
Last Updated 25 ಏಪ್ರಿಲ್ 2025, 8:52 IST
<div class="paragraphs"><p>ಟಾಮಿ ಬ್ರೂಸ್‌, ಜಹಾನ್‌ಝೈಬ್ ಅಲಿ</p></div>

ಟಾಮಿ ಬ್ರೂಸ್‌, ಜಹಾನ್‌ಝೈಬ್ ಅಲಿ

   

ವಾಷ್ಟಿಂಗ್ಟನ್‌: ‘ಅಮೆರಿಕವು ಭಾರತದೊಂದಿಗೆ ಇದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಅಮೆರಿಕ ಭಲವಾಗಿ ಖಂಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ’ ಎಂದು ವಕ್ತಾರೆ ಟಾಮಿ ಬ್ರೂಸ್‌ ಶುಕ್ರವಾರ ತಿಳಿಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಗುವಿನ ವಾತಾವರಣ ಕುರಿತು ಪಾಕಿಸ್ತಾನಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಬ್ರೂಸ್, ‘ಅಮೆರಿಕವು ಭಾರತದೊಂದಿಗೆ ಇದೆ ಎಂದು ಟ್ರಂಪ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನದೇನೂ ನಾನು ಹೇಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ADVERTISEMENT

‘ದಾಳಿಯಲ್ಲಿ ಮಡಿದವರಿಗೆ ನಮ್ಮ ಸಂತಾಪಗಳು. ನೊಂದ ಕುಟುಂಬಗಳ ಪರವಾಗಿ ನಮ್ಮ ಪ್ರಾರ್ಥನೆ ಇದೆ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಆಶಿಸುತ್ತೇವೆ. ಇಂಥ ಹೀನ ಕೃತ್ಯ ಎಸಗಿದವರನ್ನು ಕಾನೂನಿ ಎದುರು ತರಬೇಕು’ ಎಂದಿದ್ದಾರೆ.

ಏ. 22ರಂದು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಎಂಬಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಪರಿಣಾಮ 26 ಪ್ರವಾಸಿಗರು ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಘಟನೆ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಕೃತ್ಯ ಎಸಗಿದವರು ಎಲ್ಲಿಯೇ ಇದ್ದರೂ ಹುಡುಕಿ, ಊಹೆಗೂ ಮೀರಿದ ಶಿಕ್ಷೆ ಕೊಡುತ್ತೇವೆ. ಭಯೋತ್ಪಾದನೆಯು ಭಾರತದ ಆತ್ಮವನ್ನು ಎಂದಿಗೂ ಅಲುಗಾಡಿಸಲಾಗದು’ ಎಂದಿದ್ದರು.

ದಾಳಿಗೆ ಪ್ರತ್ಯುತ್ತರವಾಗಿ ಸಿಂಧೂ ಜಲ ಒಪ್ಪಂದ, ಅಟ್ಟಾರಿ ಗಡಿ ಬಂದ್, ವಿಸಾ ಹಿಂಪಡೆಯುವ ಘೋಷಣೆ ಸಹಿತ ಹಲವು ಪ್ರತೀಕಾರದ ಕ್ರಮ ಕೈಗೊಂಡಿತ್ತು. ಇದರ ಬೆನ್ನಲ್ಲೇ ಪಾಕ್‌ ಕೂಡಾ ಇಂಥದ್ದೇ ಕ್ರಮಗಳನ್ನು ಘೋಷಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.