ADVERTISEMENT

ಆರು ಮಂದಿ ಅಧಿಕಾರಿಗಳಿದ್ದ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ನಾಪತ್ತೆ: ಪತನದ ಶಂಕೆ

ಪಿಟಿಐ
Published 2 ಆಗಸ್ಟ್ 2022, 6:47 IST
Last Updated 2 ಆಗಸ್ಟ್ 2022, 6:47 IST
ಸಾಂದರ್ಭಿಕ ಚಿತ್ರ – ಐಸ್ಟಾಕ್
ಸಾಂದರ್ಭಿಕ ಚಿತ್ರ – ಐಸ್ಟಾಕ್   

ಇಸ್ಲಾಮಾಬಾದ್: ಉನ್ನತ ಕಮಾಂಡರ್ ಸೇರಿದಂತೆ ಆರು ಮಂದಿ ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಡಿದುಕೊಂಡಿದೆ.

ಸಂಪರ್ಕ ಕಡಿದುಕೊಂಡಾಗ ಹೆಲಿಕಾಪ್ಟರ್ ಬಲೂಚಿಸ್ತಾನದ ಲಸ್‌ಬೆಲಾ ಪ್ರದೇಶದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.

ADVERTISEMENT

ನಾಪತ್ತೆಯಾಗಿರುವ ಹೆಲಿಕಾಪ್ಟರ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಪ್ರವಾಹ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲು ತೆರಳಿದ್ದ ಆರು ಮಂದಿ ಅಧಿಕಾರಿಗಳು ಅದರಲ್ಲಿದ್ದರು ಎಂದು ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.