ADVERTISEMENT

ಪಾಕ್‌ನಲ್ಲಿ ಅಹ್ಮದೀಯರ ಪ್ರಾರ್ಥನಾ ಸ್ಥಳ ಧ್ವಂಸ

ಪಿಟಿಐ
Published 28 ಅಕ್ಟೋಬರ್ 2019, 19:20 IST
Last Updated 28 ಅಕ್ಟೋಬರ್ 2019, 19:20 IST

ಲಾಹೋರ್‌: ಪಂಜಾಬ್‌ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಅಹ್ಮದೀಯರಿಗೆ ಸೇರಿದ್ದ 70 ವರ್ಷ ಹಳೆಯ ಪ್ರಾರ್ಥನಾಮಂದಿರವನ್ನು ಕೆಡವಲಾಗಿದೆ ಎಂದು ಅಹ್ಮದೀಯ ಸಮುದಾಯದ ಸದಸ್ಯರೊಬ್ಬರು ಸೋಮವಾರ ತಿಳಿಸಿದ್ದಾರೆ.

1974ರಲ್ಲಿ ಪಾಕ್‌ ಸರ್ಕಾರವು ಅಹ್ಮದಿ ಸಮುದಾಯದವರು ಮುಸ್ಲಿಮರಲ್ಲ ಎಂದು ಘೋಷಿಸಿತ್ತು. ದಶಕದ ಬಳಿಕ ಅವರು ತಮ್ಮನ್ನು ಮುಸ್ಲಿಮರೆಂದು ಗುರುತಿಸಿಕೊಳ್ಳುವುದನ್ನು ನಿಷೇಧಿಸಲಾಗಿತ್ತು.

ಅವರು ಪ್ರವಚನ ಮಾಡುವುದನ್ನು ಮತ್ತು ಸೌದಿ ಅರೇಬಿಯಾಕ್ಕೆ ಯಾತ್ರೆಗೆ ತೆರಳುವುದನ್ನು ಕೂಡ ನಿಷೇಧಿಸಲಾಗಿತ್ತು.

ADVERTISEMENT

‘ಬಹವಲ್ಪುರ ಜಿಲ್ಲೆಯ ಹಸಿಲ್‌ಪುರ ಹಳ್ಳಿಯಲ್ಲಿದ್ದಪ್ರಾರ್ಥನಾ ಸ್ಥಳವನ್ನು ನೆಲಸಮ ಮಾಡಲಾಗಿದೆ. ಯಾವುದೇ ನೋಟಿಸ್‌ ನೀಡದೇ ಹಸಿಲ್‌ಪುರದ ಉಪವಿಭಾಗಾಧಿಕಾರಿ ಪ್ರಾರ್ಥನಾ ಮಂದಿರದ ಭಾಗಶಃ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ’ ಎಂದು ಸಮುದಾಯದ ವಕ್ತಾರ ಸಲೀಮುದ್ದೀನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.