ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ₹10,500 ಕೋಟಿ (1.2 ಮಿಲಿಯನ್ ಡಾಲರ್) ಸಾಲ ಸೌಲಭ್ಯ ಒದಗಿಸುವ ಸಲುವಾಗಿ ಪಾಕಿಸ್ತಾನ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವೆ ನಡೆಯುತ್ತಿರುವ ಮಾತುಕತೆಯು ಬುಧವಾರ ಸಿಬ್ಬಂದಿ ಹಂತದ ಒಪ್ಪಂದದವರೆಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಂಎಫ್‌ನ ಕಾರ್ಯಕಾರಿ ಮಂಡಳಿಯು ಅನುಮೋದನೆ ನೀಡುವುದಷ್ಟೇ ಬಾಕಿ ಇದ್ದು, ಇದಾಗುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ದೊರಕಲಿದೆ. ವಿಸ್ತೃತ ನಿಧಿ ಸೌಲಭ್ಯದ (ಇಎಫ್‌ಎಫ್) ಭಾಗವಾಗಿ ನೀಡುತ್ತಿರುವ ಹಣಕಾಸಿನ ನೆರವಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕಾರಿಗಳ ಜತೆಗೆ ಕಳೆದ ವಾರ ಐಎಂಎಫ್‌ನ ಇವಾ ಪೆಟ್ರೋವಾ ನೇತೃತ್ವದ ನಿಯೋಗ ಅಂತಿಮ ಸುತ್ತಿನ ಮಾತುಕತೆ ನಡೆಸಿತ್ತು.
ಇದೀಗ, ಸಿಬ್ಬಂದಿ ಹಂತದ ಒಪ್ಪಂದದವರೆಗೆ ಮಾತುಕತೆ ತಲುಪಿದೆ. ಇಎಫ್‌ಎಫ್ ಅಡಿಯಲ್ಲಿ ರೂಪಿಸಿರುವ ಆರ್ಥಿಕ ಯೋಜನೆಗಳು ಪಾಕಿಸ್ತಾನದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಾತರಿ ಪಡಿಸಿಕೊಳ್ಳುತ್ತಿದ್ದು, ಮಾರುಕಟ್ಟೆ ವಿಶ್ವಾಸವನ್ನು ಮರುಸ್ಥಾಪಿಸುತ್ತಿದೆ ಎಂದು ಇವಾ ಪೆಟ್ರೋವಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.