ADVERTISEMENT

Video- ಲಂಡನ್ ಕೆಫೆಯಲ್ಲಿ ಪಾಕ್ ಸಚಿವೆ: ಕಳ್ಳಿ ಕಳ್ಳಿ ಎಂದು ಮೂದಲಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 4:51 IST
Last Updated 27 ಸೆಪ್ಟೆಂಬರ್ 2022, 4:51 IST
ಮರಿಯಮ್ ಔರಂಗಜೇಬ್
ಮರಿಯಮ್ ಔರಂಗಜೇಬ್    

ಲಂಡನ್: ಪಾಕಿಸ್ತಾನ ಹಿಂದೆಂದೂ ಕಂಡೂ ಕೇಳರಿಯದ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದ್ದರೂ ಆ ಆದೇಶದ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ನಾಯಕರು, ಕಾರ್ಯಕರ್ತರು ಪರಸ್ಪರ ಆರೋಪ ಪ್ರತ್ಯಾರೋಪಗಳಕೆಸರೆರಚಾಟ ನಡೆಸುತ್ತಿದ್ದಾರೆ.

ಇದೇ ವಿಷಯವಾಗಿ ಪಾಕಿಸ್ತಾನ ಬಿಟ್ಟು ಲಂಡನ್‌ನಲ್ಲಿ ಹಾದಿಬೀದಿ ಜಗಳವಾಗಿದೆ.

ಪಾಕಿಸ್ತಾನ ಮಾಹಿತಿ ಸಚಿವೆ ಮರಿಯಮ್ ಔರಂಗಜೇಬ್ ಅವರು ಲಂಡನ್ ಕೆಫೆ ಒಂದರಲ್ಲಿ ಕಾಫಿಕುಡಿಯುತ್ತಿರುವಾಗ ಪಾಕಿಸ್ತಾನದ ಕೆಲವರು ಮರಿಯಮ್ ಅವರನ್ನು ನಿಂದಿಸಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.

ADVERTISEMENT

ಮರಿಯಮ್ ಅವರನ್ನು ತರಾಟೆಗೆ ತೆಗೆದುಕೊಂಡವರು ಪಾಕಿಸ್ತಾನದ ವಿರೋಧ ಪಕ್ಷವಾಗಿರುವ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು ಎನ್ನಲಾಗಿದೆ.

‘ಪಾಕಿಸ್ತಾನ ಭೀಕರ ಪ್ರವಾಹದಿಂದ ತತ್ತರಿಸಿದರೇ ನೀವು ಇಲ್ಲಿ ಬಂದು ಮಜಾ ಮಾಡುತ್ತಿದ್ದೀರಾ? ನೀನು ಜನರ ತೆರಿಗೆ ಹಣದ ಲೂಟಿ ಮಾಡುವವಳು ಎಂದು ಕೆಲವರು ಕರೆದರೆ ಇನ್ನೂ ಕೆಲವರು ಕಳ್ಳಿ ಕಳ್ಳಿ’ ಎಂದು ಜರಿದಿದ್ದಾರೆ.

ಈ ಬಗ್ಗೆ ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಮರಿಯಮ್ ಇದೊಂದು ಅಸಹ್ಯಕರ ಘಟನೆ. ಇಮ್ರಾನ್ ಖಾನ್ ಅವರ ಚೇಲಾಗಳು ಕೇಳಿರುವ ಕೀಳುಮಟ್ಟದ ಪ್ರಶ್ನೆಗಳಿಗೆ ನಾನು ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದೇನೆ ಎಂದಿದ್ದಾರೆ. ಮರಿಯಮ್ ಅವರ ಬೆಂಬಲಕ್ಕೆ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ನಿಂತಿದ್ದಾರೆ.ಮರಿಯಮ್ ಔರಂಗಜೇಬ್ ಮಾಜಿ ಪ್ರಧಾನಿ ನವಾಜ್ ಷರೀಪ್ ಅವರ ಮಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.