ಇಸ್ಲಾಮಾಬಾದ್: ಫೇಸ್‌ಬುಕ್ ಲೈವ್ ಮೂಲಕ ಸುದ್ದಿಗೋಷ್ಠಿ ಪ್ರಸಾರವಾಗುತ್ತಿದ್ದ ವೇಳೆ ಪಾಕಿಸ್ತಾನದ ಸಚಿವರಿಗೆ ಬೆಕ್ಕಿನ ಕಿವಿಗಳು ಮತ್ತು ಮೀಸೆಗಳಿರುವ ಎಮೋಜಿ ಅಂಟಿದ್ದು, ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಪಾಕಿಸ್ತಾನಖೈಬರ್ ಪಂಖ್ತುಖ್ವಾ ಪ್ರಾಂತ್ಯದ ಸಚಿವ ಶೌಕತ್ ಯೂಸುಫ್‌ಝೈ ಮತ್ತು ಇತರ ಸಚಿವರ ಸುದ್ದಿಗೋಷ್ಠಿ ಫೇಸ್‌ಬುಕ್ ಲೈವ್‌ನಲ್ಲಿ ಪ್ರಸಾರವಾಗಿದೆ. ಸಚಿವರ ಮುಖದಲ್ಲಿ ಬೆಕ್ಕಿನ ಕಿವಿ ಮತ್ತು ಮೀಸೆ ಇರುವ ಎಮೋಜಿಗಳು ಸ್ವಯಂಚಾಲಿತವಾಗಿ ಕಾಣಿಸಿಕೊಂಡಿವೆ. ಇದು ಸಚಿವರ ಗಮನಕ್ಕೆ ಬಂದಿಲ್ಲ.
ಪಾಕಿಸ್ತಾನದ ನೆಟ್ಟಿಗರು ಈ ವಿಡಿಯೊ ಬಳಸಿಕೊಂಡು ಟ್ರೋಲ್ ಮಾಡಿದ್ದಾರೆ. ‘ಯಾರು ಈ ಬೆಕ್ಕುಗಳನ್ನು ಸುದ್ದಿಗೋಷ್ಠಿಗೆ ಬಿಟ್ಟವರು’ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ‘ಸಚಿವರು ಬೆಕ್ಕಿನ ವೇಷದಲ್ಲಿಮುದ್ದಾಗಿ ಕಾಣುತ್ತಿದ್ದಾರೆ’ ಎಂದು ಕಾಲೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.