ADVERTISEMENT

ಕಾಶ್ಮೀರದ ಜನರಿಗೆ ಸಹಾಯ ಮಾಡಲು ಎಲ್‌ಒಸಿ ದಾಟದಂತೆ ಇಮ್ರಾನ್‌ ಖಾನ್‌ ಎಚ್ಚರಿಕೆ

ಪಿಟಿಐ
Published 5 ಅಕ್ಟೋಬರ್ 2019, 20:23 IST
Last Updated 5 ಅಕ್ಟೋಬರ್ 2019, 20:23 IST
ಇಮ್ರಾನ್‌ ಖಾನ್‌ 
ಇಮ್ರಾನ್‌ ಖಾನ್‌    

ಇಸ್ಲಮಾಬಾದ್: ಗಡಿ ನಿಯಂತ್ರಣಾ ರೇಖೆ(ಎಲ್‌ಒಸಿ)ದಾಟಿ ಕಾಶ್ಮೀರದ ಜನತೆಗೆ ಸಹಾಯ ಮಾಡಲು ಯಾವುದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ)ನಿವಾಸಿಗಳು ತೆರಳಬಾರದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಸೂಚಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿಗಳನ್ನು ಕಂಡು ಪಿಒಕೆ ಕಾಶ್ಮೀರಿಗಳಿಗೆ ಆಗುತ್ತಿರುವ ಯಾತನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಮಾನವೀಯ ನೆರವು ನೀಡಲು ಅಥವಾ ಕಾಶ್ಮೀರಿಗಳಿಗೆ ಬೆಂಬಲವಾಗಿ ನಿಲ್ಲಲು ಎಲ್‌ಒಸಿ ದಾಟಿ ಹೋದರೆ ಭಾರತ ನಿಮ್ಮನ್ನು ತಪ್ಪಾಗಿ ಬಿಂಬಿಸಲಿದೆ’ ಎಂದು ಖಾನ್‌ ಟ್ವೀಟ್‌ ಮಾಡಿದ್ದಾರೆ.

ಪಿಒಕೆಯ ಹಲವು ಭಾಗಗಳಿಂದ ಮುಜಾಫರಾಬಾದ್‌ಗೆ ನೂರಾರು ಕಾಶ್ಮೀರಿಗಳು ಬೈಕ್‌ ರ್‍ಯಾಲಿ ನಡೆಸಿದ ಮರುದಿನವೇ ಖಾನ್‌ ಈ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರಆಗಸ್ಟ್‌ 5ರಂದು ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಬಿಕ್ಕಟ್ಟು ಹೆಚ್ಚಿದೆ. ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸುವ ಪ್ರಯತ್ನವನ್ನು ಪಾಕಿಸ್ತಾನ ನಡೆಸಿದೆ. ಆದರೆ ಇದು ಆಂತರಿಕ ವಿಚಾರ ಎಂದು ಭಾರತ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.