ADVERTISEMENT

‘ಸಾಧಾರಣ ಕ್ರಮ ಕೈಗೊಂಡ ನಂತರವೂ ಪಾಕಿಸ್ತಾನ ಉಗ್ರರ ಸುರಕ್ಷಿತ ತಾಣವಾಗಿಯೇ ಉಳಿದಿದೆ’

ಅಮೆರಿಕ ವಿದೇಶಾಂಗ ಇಲಾಖೆ

ಏಜೆನ್ಸೀಸ್
Published 25 ಜೂನ್ 2020, 1:30 IST
Last Updated 25 ಜೂನ್ 2020, 1:30 IST
   

ವಾಷಿಂಗ್ಟನ್:ಉಗ್ರ ಸಂಘಟನೆಗಳಿಗೆಆರ್ಥಿಕ ನೆರವು ನೀಡುವುದರ ವಿರುದ್ಧ‘ಸಾಧಾರಣ ಕ್ರಮ’ಗಳನ್ನುಕೈಗೊಂಡ ನಂತರವೂ, ಪಾಕಿಸ್ತಾನ‌ ಉಗ್ರರಸುರಕ್ಷಿತ ತಾಣವಾಗಿಯೇ ಉಳಿದಿದೆ ಎಂದು ಅಮೆರಿಕಹೇಳಿದೆ.

2018ರಲ್ಲಿ ಅಮೆರಿಕ ಅಧ್ಯಕ್ಷಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುವುದನ್ನುಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. 2019ರಿಂದ ಇದು ಜಾರಿಯಲ್ಲಿದೆ.

ಭಯೋತ್ಪಾದನೆ ಕುರಿತು ವಿವಿಧ ರಾಷ್ಟ್ರಗಳು ಕೈಗೊಂಡ ಕ್ರಮಗಳ ಕುರಿತು ಬಿಡುಗಡೆ ಮಾಡಿರುವ 2019ರವಾರ್ಷಿಕ ವರದಿಯಲ್ಲಿ,‘ಪಾಕಿಸ್ತಾನವು ಉಗ್ರರಿಗೆ ಹಣಕಾಸು ನೆರವು ನೀಡುವುದರ ವಿರುದ್ಧ 2019ರಲ್ಲಿ ಸಾಧಾರಣ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ರಕ್ಷಣಾ ಪಡೆಗಳ ಮೇಲೆ ಜೈಷ್‌‌–ಎ–ಮೊಹಮ್ಮದ್‌ (ಜೆಇಎಂ) ಸಂಘಟನೆಯಉಗ್ರರು ದಾಳಿ ಸಂಘಟಿಸಿದ್ದ ಬಳಿಕ, ಭಾರತವು ದೊಡ್ಡ ಮಟ್ಟದ ದಾಳಿಗಳು ನಡೆಯದಂತೆ ಎಚ್ಚರ ವಹಿಸಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ADVERTISEMENT

‘ಆದಾಗ್ಯೂ, ಪ್ರಾದೇಶಿಕವಾಗಿ ಕೇಂದ್ರೀಕೃತವಾಗಿರುವ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಸುರಕ್ಷಿತ ತಾಣವಾಗಿದೆ’ ಎಂದು ಹೇಳಿದೆ.

ಪಾಕಿಸ್ತಾನವು ತಾಲಿಬಾನ್‌ ಮತ್ತು ಹಕ್ಕಾನಿ ಸಹಸಂಘಟನೆಗಳು ಅಫ್ಗಾನಿಸ್ತಾನವನ್ನು ಗುರಿಯಾಗಿರಿಸಿ ಮತ್ತು ಜೈಷ್–ಎ–ಮೊಹಮ್ಮದ್‌‌ನಂತಹ ಇ‌ನ್ನಿತರ ಸಂಘಟನೆಗಳು ಭಾರತವನ್ನು ಗುರಿಯಾಗಿರಿಸಿ ತನ್ನ ಪ್ರದೇಶದಲ್ಲಿ ಕಾರ್ಯಾಚರಿಸಲು ಅವಕಾಶ ಮಾಡಿಕೊಟ್ಟಿತ್ತು ಎಂದೂ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.