ADVERTISEMENT

ಪಾಕಿಸ್ತಾನದಲ್ಲಿ ವಿದ್ಯುತ್‌ ವ್ಯತ್ಯಯ: ಕರಾಚಿ, ಲಾಹೋರ್‌, ಪೇಶಾವರ ಕತ್ತಲಲ್ಲಿ

ರಾಯಿಟರ್ಸ್
Published 23 ಜನವರಿ 2023, 18:10 IST
Last Updated 23 ಜನವರಿ 2023, 18:10 IST
ರಾಷ್ಟ್ರವ್ಯಾಪಿ ವಿದ್ಯುತ್ ಕಡಿತದ ಸಮಯದಲ್ಲಿ  ಮಾರುಕಟ್ಟೆಯ ಅಂಗಡಿಯಲ್ಲಿ ಕುಳಿತು ಪವಿತ್ರ ಕುರಾನ್ ಪಠಿಸುತ್ತಿರುವ ವ್ಯಕ್ತಿ
ರಾಷ್ಟ್ರವ್ಯಾಪಿ ವಿದ್ಯುತ್ ಕಡಿತದ ಸಮಯದಲ್ಲಿ  ಮಾರುಕಟ್ಟೆಯ ಅಂಗಡಿಯಲ್ಲಿ ಕುಳಿತು ಪವಿತ್ರ ಕುರಾನ್ ಪಠಿಸುತ್ತಿರುವ ವ್ಯಕ್ತಿ   

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯುತ್‌ ಪೂರೈಕೆಯಲ್ಲಿಯೂ ವ್ಯತ್ಯವಾಗಿದೆ. ರಾಷ್ಟ್ರೀಯ ವಿದ್ಯುತ್ ಗ್ರಿಡ್‌ನಲ್ಲಿ ವೈಫಲ್ಯ ಉಂಟಾಗಿ ಕರಾಚಿ, ಲಾಹೋರ್‌, ಪೇಶಾವರ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಬೆಳಿಗ್ಗೆ 7.34ರ (ಸ್ಥಳೀಯ ಸಮಯ) ಹೊತ್ತಿಗೆ ರಾಷ್ಟ್ರೀಯ ಗ್ರಿಡ್‌ನಲ್ಲಿ ವಿದ್ಯುತ್‌ ಹರಿವಿನ ಪ್ರಮಾಣ ಕುಂಠಿತವಾಗಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ವ್ಯವಸ್ಥೆಯನ್ನು ಸರಿಪಡಿಸಲು ದುರಸ್ಥಿ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೆಲವು ಗ್ರಿಡ್‌ಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.