ADVERTISEMENT

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 13 ಸೈನಿಕರು ಸಾವು

ರಾಯಿಟರ್ಸ್
Published 28 ಜೂನ್ 2025, 10:31 IST
Last Updated 28 ಜೂನ್ 2025, 10:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಡೆರಾ ಇಸ್ಮಾಯಿಲ್‌ ಖಾನ್‌ (ಪಾಕಿಸ್ತಾನ): ಪಾಕಿಸ್ತಾನದ ಉತ್ತರ ವಜೀರಿಸ್ತಾನ ಜಿಲ್ಲೆಯ ಮಿರ್‌ ಆಲಿ ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 13 ಸೈನಿಕರು ಮೃತಪಟ್ಟಿದ್ದಾರೆ.

ಸ್ಫೋಟಕ ತುಂಬಿದ ಕಾರನ್ನು ಪಾಕಿಸ್ತಾನ ಸೇನಾ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆಸಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮಕ್ಕಳೂ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಮೀಪದ ಎರಡು ಕಟ್ಟಡಗಳ ಚಾವಣಿ ಕುಸಿದಿವೆ. ಗಾಯಗೊಂಡವನ್ನು ಹೆಲಿಕಾಪ್ಟರ್‌ ಮೂಲಕ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪಾಕಿಸ್ತಾನದ ನಾಲ್ವರು ಗುಪ್ತಚರ ಅಧಿಕಾರಿಗಳು ಮತ್ತು ಮಿರ್‌ ಆಲಿ ಪ್ರದೇಶದ ಸ್ಥಳೀಯ ಅಧಿಕಾರಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಯಾವುದೇ ಸಂಘಟನೆ ಇದುವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಪಾಕಿಸ್ತಾನ ಸೇನೆಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

‘ಇದೊಂದು ದೊಡ್ಡ ಸ್ಫೋಟವಾಗಿತ್ತು. ಸ್ಫೋಟ ನಡೆದ ಸ್ಥಳದಲ್ಲಿ ಕಟ್ಟಡಗಳಿಂದ ದಟ್ಟವಾಗಿ ಹೊಗೆ ಹೊರಬರುತ್ತಿತ್ತು’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಫೋಟ ನಡೆದ ಸ್ಥಳ ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿಗೆ ಹೊಂದಿಕೊಂಡಿದ್ದು, ಇಲ್ಲಿ ಪಾಕಿಸ್ತಾನಿ ತಾಲಿಬಾನ್ ಎಂದು ಹೆಸರಾಗಿರುವ ತೆಹರೀಕ್ ಎ–ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಸೇರಿದಂತೆ ಹಲವು ಇಸ್ಲಾಮಿಕ್‌ ಉಗ್ರಗಾಮಿ ಸಂಘಟನೆಗಳು ಪ್ರಾಬಲ್ಯ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.