ಪೆಶಾವರ(ಪಾಕಿಸ್ತಾನ): ಸಂಘರ್ಷ ಪೀಡಿತ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದಕರು ಮೂವರು ಬುಡಕಟ್ಟು ನಾಯಕರನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ.
ಈ ಉಗ್ರರು ನಿಷೇಧಿತ ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಜೊತೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೇತಾನಿ ಬುಡಕಟ್ಟಿಗೆ ಸೇರಿದ ಈ ಮೂವರನ್ನು ಉಗ್ರರು ಗುರುವಾರ ಅಪಹರಿಸಿದ್ದರು. ಹತ್ಯೆ ಬಳಿಕ, ಬನ್ನು ಜಿಲ್ಲೆಯ ತೋಚಿ ಸೇತುವೆ ಸಮೀಪ ಮೃತದೇಹಗಳನ್ನು ಎಸೆದಿದ್ದರು ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ, ಭದ್ರತಾ ಪಡೆಗಳ ಪರವಾಗಿ ಗೂಢಚಾರಿಕೆ ನಡೆಸುತ್ತಾರೆ ಎಂದು ಸಂಶಯದ ಮೇಲೆ ವ್ಯಕ್ತಿಗಳನ್ನು ಉಗ್ರರು ಅಪಹರಿಸಿ, ಹತ್ಯೆಗೈಯುತ್ತಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.