ಲಾಹೋರ್: ಪಾಕಿಸ್ತಾನಿ ನಟಿ ಹಾಗೂ ಮಾಡೆಲ್ ನಯಾಬ್ ನದೀಮ್ ಅವರ ಬರ್ಬರ ಕೊಲೆಯಾಗಿದೆ. ಲಾಹೋರ್ ಹೊರವಲಯದ ಡಿಫೆನ್ಸ್ ಅಕಾಡೆಮಿಯ ಅಪಾರ್ಟಮೆಂಟ್ ಒಂದರಲ್ಲಿ ಅವರ ಶವ ಬೆತ್ತಲೆಯಾಗಿ, ಅರೆಬರೆ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಘಟನೆ ಶನಿವಾರವೇ ನಡೆದಿದ್ದು, ನಯಾಬ್ ಅವರ ಸಹೋದರ ಅಪಾರ್ಟಮೆಂಟ್ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕತ್ತು ಹಿಸುಕಿ, ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಲಾಹೋರ್ ಪೊಲೀಸ್ ಅಧಿಕಾರಿ ನಯ್ಯಾರ್ ನಿಸಾರ್ ತಿಳಿಸಿದ್ದಾರೆ.
ನಯಾಬ್ ಅವರು ಏಕಾಂಗಿಯಾಗಿ ಜೀವಿಸುತ್ತಿದ್ದರು, ಅವರು ಇನ್ನೂ ಮದುವೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.