ಜೆರುಸಲೇಮ್: ವೆಸ್ಟ್ಬ್ಯಾಂಕ್ನಲ್ಲಿ ಮಂಗಳವಾರಪಾಲೆಸ್ಟೀನ್ ಪ್ರಜೆಯೊಬ್ಬ ಚೂರಿ ಇರಿದು ಇಬ್ಬರು ಇಸ್ರೇಲ್ ನಾಗರಿಕರನ್ನು ಕೊಲೆ ಮಾಡಿ, ಇತರ ನಾಲ್ವರನ್ನು ಗಾಯಗೊಳಿಸಿದ್ದಾನೆ. ನಂತರ, ಇಸ್ರೇಲ್ ಪಡೆಗಳುಪಾಲೆಸ್ಟೀನ್ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿವೆ.
ವೆಸ್ಟ್ಬ್ಯಾಂಕ್ನ ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರದ ಬಳಿ ಈ ಕೃತ್ಯ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚೂರಿ ಇರಿತಕ್ಕೆ ಕಾರಣ ಗೊತ್ತಾಗಿಲ್ಲ. ಯಾವ ಸಂಘಟನೆಯೂ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.