ADVERTISEMENT

ಪಶುಪತಿನಾಥ ದೇಗುಲದ ಆಸ್ತಿ ಮಾಹಿತಿ ಬಹಿರಂಗ

ಪಿಟಿಐ
Published 6 ಜೂನ್ 2019, 19:36 IST
Last Updated 6 ಜೂನ್ 2019, 19:36 IST
.
.   

ಕಠ್ಮಂಡು (ಪಿಟಿಐ):ಪಶುಪತಿನಾಥ ದೇಗುಲದ ಸೇರಿದ ಆಸ್ತಿಯ ವಿವರಗಳನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಗಿದೆ.

1962ರಿಂದ 2018ರವರೆಗೆ 56 ವರ್ಷಗಳ ಅವಧಿಯಲ್ಲಿ ದೇವಸ್ಥಾನ ಹೊಂದಿರುವ ಚಿನ್ನ, ಬೆಳ್ಳಿ ಮತ್ತು ಆದಾಯದ ಮಾಹಿತಿಗಾಗಿ ಸಮಿತಿ ರಚಿಸಲಾಗಿತ್ತು.

ದೇವಸ್ಥಾನದ ಸುಪರ್ದಿಯಲ್ಲಿ9.27 ಕೆ.ಜಿ ಬಂಗಾರ, 316 ಕೆಜಿ ಬೆಳ್ಳಿ ಇದೆ. ವಿವಿಧ ಬ್ಯಾಂಕ್‌ಗಳಲ್ಲಿ₹ 120 ಕೋಟಿ ನಗದು ಇರಿಸಲಾಗಿದೆ. 3,66 ಹೆಕ್ಟೇರ್‌ ಭೂ ಪ್ರದೇಶವಿದೆ ಎಂದು ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್‌ ಉಪ್ರೇತಿ ತಿಳಿಸಿದ್ದಾರೆ.

ADVERTISEMENT

ಈ ದೇವಸ್ಥಾನ ಐದನೇ ಶತಮಾನಕ್ಕೆ ಸೇರಿದ್ದಾಗಿದ್ದು, ದೇವಸ್ಥಾನದ ಆಸ್ತಿಯ ಅಧ್ಯಯನಕ್ಕಾಗಿ 2017ರಲ್ಲಿ ಸರ್ಕಾರ ಹನ್ನೊಂದು ಮಂದಿಯ ಸಮಿತಿ ರಚಿಸಿತ್ತು.ಹಲವು ಪ್ರದೇಶಗಳಲ್ಲಿ ದೇವಸ್ಥಾನಕ್ಕೆ ಸೇರಿದ ಆಸ್ತಿಗಳಿವೆ. ಆದರೆ ಸರಿಯಾದ ದಾಖಲೆಗಳಿಲ್ಲದ ಕಾರಣ ಅವುಗಳನ್ನು ಟ್ರಸ್ಟ್‌ ಅಡಿಯಲ್ಲಿ ಸೇರಿಸಿಲ್ಲ ಎಂದು ಸಮಿತಿ ತಿಳಿಸಿದೆ. ಟ್ರಸ್ಟ್‌ಗೆ ಸೇರಿದ ಭೂಮಿಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗಾಲ್ಫ್‌ ಕೋರ್ಸ್‌, ಫೈವ್‌ ಸ್ಟಾರ್‌ ಹೋಟೆಲ್‌ಗೆ ಗುತ್ತಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.