ADVERTISEMENT

ಚೀನಾ ಸವಾಲು ಎದುರಿಸಲು ವಿಶೇಷ ಟಾಸ್ಕ್‌ಫೋರ್ಸ್: ಜೋ ಬೈಡೆನ್

ಪಿಟಿಐ
Published 11 ಫೆಬ್ರುವರಿ 2021, 2:44 IST
Last Updated 11 ಫೆಬ್ರುವರಿ 2021, 2:44 IST
ಪೆಂಟಗನ್
ಪೆಂಟಗನ್   

ವಾಷಿಂಗ್ಟನ್: ಚೀನಾದಿಂದ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಪೆಂಟಗನ್‌ನಲ್ಲಿ ವಿಶೇಷ ಟಾಸ್ಕ್‌ಫೋರ್ಸ್ ರಚಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಮೊದಲ ಬಾರಿಗೆ ಪೆಂಟಗನ್‌ಗೆ ಮೊದಲ ಭೇಟಿ ನೀಡಿದ ಅವರು, ನಾಗರಿಕ ಮತ್ತು ಮಿಲಿಟರಿ ಕ್ಷೇತ್ರದ ತಜ್ಞರನ್ನೊಳಗೊಂಡ ನೂತನ ಟಾಸ್ಕ್‌ಫೋರ್ಸ್ ಅತ್ಯಂತ ತ್ವರಿತವಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಕಾರ್ಯತಂತ್ರ ರೂಪಿಸಲಿದೆ ಎಂದು ತಿಳಿಸಿದ್ದಾರೆ.

ಚೀನಾದ ಸವಾಲುಗಳನ್ನು ಎದುರಿಸಲು ಎಲ್ಲರ ಸಹಕಾರ ಅಗತ್ಯವಿದೆ. ಸ್ಪರ್ಧೆಯಲ್ಲಿ ಅಮೆರಿಕದ ಜನತೆಯ ಗೆಲುವಿಗಾಗಿ ಸರ್ಕಾರ, ಜನಪ್ರತಿನಿಧಿಗಳನ್ನೊಳಗೊಂಡ ತಂಡ ಕಾರ್ಯನಿರ್ವಹಿಸಲಿದೆ ಎಂದು ಬೈಡೆನ್ ಹೇಳಿದ್ದಾರೆ.

ADVERTISEMENT

ರಕ್ಷಣಾ ಕಾರ್ಯದರ್ಶಿಯ ವಿಶೇಷ ಅಧಿಕಾರಿ ಡಾ. ಎಲಿ ರಾನರ್ ನೇತೃತ್ವದ ಟಾಸ್ಕ್‌ಫೋರ್ಸ್, ರಚನೆಯಾದ ನಾಲ್ಕೇ ತಿಂಗಳಿನಲ್ಲಿ ವರದಿ ತಯಾರಿಸಿ, ಶಿಫಾರಸು ನೀಡಲಿದೆ. ಅದನ್ನು ಸರ್ಕಾರ ಚರ್ಚಿಸಿ ಕ್ರಮ ಕೈಗೊಳ್ಳಲಿದೆ ಎಂದು ಪೆಂಟಗನ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.