ADVERTISEMENT

ಮ್ಯಾನ್ಮಾರ್‌: ಬಿಂದಿಗೆ, ತಟ್ಟೆ ಬಾರಿಸಿ; ಹಾರ್ನ್‌ ಹಾಕಿ ಪ್ರತಿಭಟನೆ

ಮಿಲಿಟರಿ ದಂಗೆಗೆ ಜನರ ಆಕ್ರೋಶ

ಏಜೆನ್ಸೀಸ್
Published 3 ಫೆಬ್ರುವರಿ 2021, 5:59 IST
Last Updated 3 ಫೆಬ್ರುವರಿ 2021, 5:59 IST
ಮ್ಯಾನ್ಮಾರ್‌ನ ಯಾಂಗೂನ್‌ ನಗರದಲ್ಲಿ ಜನರು ತಟ್ಟೆ, ಬಿಂದಿಗೆ ಬಾರಿಸುವ ಮೂಲಕ ಮಿಲಿಟರಿ ನಡೆಸಿದ ದಂಗೆಗೆ ಪ್ರತಿಭಟನೆ ವ್ಯಕ್ತಪಡಿಸಿದರು –ರಾಯಿಟರ್ಸ್‌ ಚಿತ್ರ
ಮ್ಯಾನ್ಮಾರ್‌ನ ಯಾಂಗೂನ್‌ ನಗರದಲ್ಲಿ ಜನರು ತಟ್ಟೆ, ಬಿಂದಿಗೆ ಬಾರಿಸುವ ಮೂಲಕ ಮಿಲಿಟರಿ ನಡೆಸಿದ ದಂಗೆಗೆ ಪ್ರತಿಭಟನೆ ವ್ಯಕ್ತಪಡಿಸಿದರು –ರಾಯಿಟರ್ಸ್‌ ಚಿತ್ರ   

ಯಾಂಗೂನ್‌: ಮಿಲಿಟರಿ ದಂಗೆ ಎದ್ದು ದೇಶದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡ ಕ್ರಮಕ್ಕೆ ಪ್ರತಿಭಟನೆ ವ್ಯಕ್ತಪಡಿಸಲು ಮ್ಯಾನ್ಮಾರ್‌ ಜನತೆ ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ದೇಶದ ದೊಡ್ಡ ನಗರವಾದ ಯಾಂಗೂನ್‌ನಲ್ಲಿ ಕೆಲವರು ಬಿಂದಿಗೆ, ತಟ್ಟೆ ಸೇರಿದಂತೆ ವಿವಿಧ ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮ್ಮ ಕಾರುಗಳ ಹಾರ್ನ್‌ ಶಬ್ದವನ್ನು ಜೋರಾಗಿಸುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು.

ಕೆಲವೆಡೆ ಕಂಡು ಬಂದ ಈ ರೀತಿಯ ಪ್ರತಿಭಟನೆ ಕೆಲವು ನಿಮಿಷಗಳ ಕಾಲ ಇರಲಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿನೂತನ ಪ್ರತಿಭಟನೆ ನಗರದ ಇತರ ಪ್ರದೇಶಗಳಿಗೂ ವ್ಯಾಪಿಸಿ, ಗಂಟೆಗಳ ಕಾಲ ನಡೆಯಿತು.

ಕೆಲವು ಪ್ರತಿಭಟನಕಾರರು ಆಂಗ್‌ ಸಾನ್‌ ಸೂ ಕಿ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗುತ್ತಿದ್ದುದು ಕಂಡು ಬಂತು.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.