ADVERTISEMENT

ಪೇಶಾವರ | ಹೆಲಿಕಾಪ್ಟರ್‌ ‍ಪತನ: ಐವರು ಸಾವು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 15:43 IST
Last Updated 15 ಆಗಸ್ಟ್ 2025, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೇಶಾವರ: ಪಾಕಿಸ್ತಾನದ ಈಶಾನ್ಯ ಪ್ರಾಂತ್ಯದಲ್ಲಿ ಮಳೆ ಹಾನಿ ಪ್ರದೇಶದ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್‌ ಪತನಗೊಂಡು, ಇಬ್ಬರು ಪೈಲಟ್‌ಗಳು ಸೇರಿದಂತೆ ಐವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಪ್ರಾಂತೀಯ ಮುಖ್ಯಮಂತ್ರಿ ಶುಕ್ರವಾರ ತಿಳಿಸಿದ್ದಾರೆ.

ಮಹಮಂಡ್‌ ಜಿಲ್ಲೆಯ ಬಜೌರ್‌ ಪ್ರದೇಶಕ್ಕೆ ಪರಿಹಾರ ಸಾಮಗ್ರಿ ಸಮೇತ ತೆರಳುತ್ತಿದ್ದ ಖೈಬರ್‌ ಪಖ್ತುಂಖ್ವಾ ಸರ್ಕಾರದ ಎಂಐ–17 ಹೆಲಿಕಾಪ್ಟರ್‌ ಹವಾಮಾನ ವೈಪರೀತ್ಯದಿಂದ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT