ADVERTISEMENT

ಜಪಾನ್‌: ಅಭಿವೃದ್ಧಿಗೆ ಕೈಜೋಡಿಸುವಂತೆ ರಾಷ್ಟ್ರಪತಿ ಕರೆ

ಪಿಟಿಐ
Published 22 ಅಕ್ಟೋಬರ್ 2019, 17:14 IST
Last Updated 22 ಅಕ್ಟೋಬರ್ 2019, 17:14 IST
ಕೋವಿಂದ್‌
ಕೋವಿಂದ್‌   

ಟೋಕಿಯೊ: ಭಾರತದ ಅಭಿವೃದ್ಧಿಗೆ ಕೈಜೋಡಿಸುವಂತೆ ಜಪಾನಿನಲ್ಲಿರುವ ಅನಿವಾಸಿ ಭಾರತೀಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಂಗಳವಾರ ಕರೆ ನೀಡಿದರು.

ಜಪಾನಿನ ರಾಜ ನರುಹಿತೊ ಅವರ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು, ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಅಭಿವೃದ್ಧಿಯ ಪಥದಲ್ಲಿರುವ ದೇಶ. ಭಾರತ– ಜಪಾನ್‌ ನಡುವೆ ಗಟ್ಟಿಯಾದ ಸಂಬಂಧ ಇದೆ. ಉಭಯ ದೇಶಗಳ ಸಾಂಸ್ಕೃತಿಕ ಸಂಬಂಧ ಐತಿಹಾಸಿಕವಾದದ್ದು ಎಂದು ಬಣ್ಣಿಸಿದರು.

ADVERTISEMENT

‘ಎರಡೂ ದೇಶಗಳು ಬೌದ್ಧ ಧರ್ಮದಿಂದ ಹಿಂದೂ ಧರ್ಮದವರೆಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪರ್ಕಗಳನ್ನು ಹೊಂದಿವೆ. ನಮ್ಮ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಸಂಬಂಧಗಳು ಬಲಿಷ್ಠಗೊಂಡಿವೆ.

ಭಾರತದ ಆರ್ಥಿಕ ಅಭಿವೃದ್ಧಿ ವಿಷಯದಲ್ಲಿ ಜಪಾನ್‌ ಪ್ರಮುಖ ಪಾಲುದಾರ ದೇಶವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ಸಂಬಂಧ ವೃದ್ಧಿಯಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.