ಮಾಸ್ಕೋ: ಉಕ್ರೇನ್‌ನೊಂದಿಗೆ ನೇರ ಮಾತುಕತೆ ನಡೆಸುವ ಪ್ರಸ್ತಾಪವೊಂದನ್ನು ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಮುಂದಿಟ್ಟಿದ್ದಾರೆ.
‘ಮೇ 15 ರಂದು ಇಸ್ತಾಂಬುಲ್‌ನಲ್ಲಿ ಉಕ್ರೇನ್‌ನೊಂದಿಗೆ ನೇರ ಮಾತುಕತೆ ನಡೆಸಲು ಪ್ರಸ್ತಾಪಿಸಲಾಗಿದೆ. ಈ ಮಾತುಕತೆ ಮೂಲಕ ಶಾಶ್ವತ ಶಾಂತಿ ಸ್ಥಾಪನೆ ಮತ್ತು ಯುದ್ಧದ ಕಾರಣಗಳನ್ನು ತೊಡೆದುಹಾಕಲು ಉದ್ದೇಶಿಸಲಾಗಿದೆ’ ಎಂದು ಪುಟಿನ್ ಹೇಳಿದ್ದಾರೆ.
‘ನಮ್ಮ ಪ್ರಸ್ತಾಪವನ್ನು ಅವರ(ಉಕ್ರೇನ್) ಮುಂದೆ ಇಟ್ಟಿದ್ದೇವೆ. ಈ ಕುರಿತ ನಿರ್ಧಾರವು ಈಗ ಉಕ್ರೇನ್‌ನ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಮೇಲಿದೆ’ ಎಂದು ತಿಳಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆ ಕುರಿತ ಉಕ್ರೇನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಿಜಯೋತ್ಸವ ಪರೇಡ್ ಸಂದರ್ಭ 72 ಗಂಟೆಗಳ ಕದನ ವಿರಾಮ, ಈಸ್ಟರ್ ಕದಾನ ವಿರಾಮ ಸೇರಿದಂತೆ ಹಲವಾರು ಕದನ ವಿರಾಮಗಳನ್ನು ರಷ್ಯಾ ಪ್ರಸ್ತಾಪಿಸಿತ್ತು. ಆದರೆ ಇವುಗಳನ್ನು ಉಲ್ಲಂಘಿಸಿ ಉಕ್ರೇನ್ ರಷ್ಯಾದ ಮೇಲೆ ದಾಳಿ ನಡೆಸಿತ್ತು’ ಎಂದು ಆರೋಪಿಸಿದ್ದಾರೆ.
‘ಮೇ ಕದನ ವಿರಾಮದ ಸಂದರ್ಭ ಉಕ್ರೇನ್ 524 ವೈಮಾನಿಕ ಡ್ರೋನ್‌ಗಳು, 45 ಸಮುದ್ರ ಡ್ರೋನ್‌ಗಳು ಸೇರಿದಂತೆ ಹಲವಾರು ಪಾಶ್ಚಿಮಾತ್ಯ ಕ್ಷಿಪಣಿಗಳೊಂದಿಗೆ ರಷ್ಯಾದ ಮೇಲೆ ದಾಳಿ ಮಾಡಿತ್ತು. ಆದರೆ, ಇದನ್ನು ರಷ್ಯಾ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.