ADVERTISEMENT

ರಾಜಪಕ್ಸೆ ಸಹೋದರ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಪಿಟಿಐ
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST
ಗೊತಭಾಯ ರಾಜಪಕ್ಸೆ
ಗೊತಭಾಯ ರಾಜಪಕ್ಸೆ   

ಕೊಲಂಬೊ: ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸಹೋದರ ಗೊತಭಾಯ ರಾಜಪಕ್ಸೆ ಅವರು ಶ್ರೀಲಂಕಾಕ್ಕೆ ಮರಳಿದ್ದಾರೆ.

ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅಮೆರಿಕ ಪೌರತ್ವವನ್ನು ತ್ಯಜಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಗೊತಭಾಯ ಹೇಳಿದ್ದಾರೆ.

ಗೊತಭಾಯ ಅವರು ಶ್ರೀಲಂಕಾ ಮತ್ತು ಅಮೆರಿಕದ ಪೌರತ್ವ ಹೊಂದಿದ್ದಾರೆ. ಮಾಜಿ ರಕ್ಷಣಾ ಕಾರ್ಯದರ್ಶಿ ಗೊತಭಾಯ ಅವರನ್ನು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ಬಣದ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತಿದೆ.

ADVERTISEMENT

ಸಂವಿಧಾನಾತ್ಮಕವಾಗಿ ಮೂರನೇ ಬಾರಿಗೆ ಅಧ್ಯಕ್ಷ ಹುದ್ದೆಗೇರಲು ಮಹಿಂದಾ ರಾಜಪಕ್ಸೆಗೆ ಅವಕಾಶವಿಲ್ಲ.

ಈ ಕಾರಣಕ್ಕೆ ಗೊತಭಾಯ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.