ADVERTISEMENT

ಮಕ್ಕಳು,ಮೊಮ್ಮಕ್ಕಳ ಕನಸಿನ ದೀಪ ಬೆಳಗಿಸುವ ಬ್ರಿಟನ್ ನಿರ್ಮಿಸುತ್ತೇನೆ: ರಿಷಿ ಸುನಕ್

ಲಂಡನ್‌ನ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ(10 ಡೌನಿಂಗ್ ಸ್ಟ್ರೀಟ್‌) ದೀಪಾವಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡ ರಿಷಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 6:15 IST
Last Updated 27 ಅಕ್ಟೋಬರ್ 2022, 6:15 IST
ರಿಷಿ ಸುನಕ್ ಟ್ವಿಟರ್ ಖಾತೆಯ ಚಿತ್ರ
ರಿಷಿ ಸುನಕ್ ಟ್ವಿಟರ್ ಖಾತೆಯ ಚಿತ್ರ   

ಲಂಡನ್: ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತ ಮೂಲದ ರಿಷಿ ಸುನಕ್, ಲಂಡನ್‌ನ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ(10 ಡೌನಿಂಗ್ ಸ್ಟ್ರೀಟ್‌) ದೀಪಾವಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರು

ಇದೇವೇಳೆ, ಟ್ವೀಟ್ ಮೂಲಕ ದೇಶದ ಜನರಿಗೆ ದೀಪಾವಳಿ ಶುಭಾಶಯ ಕೋರಿರುವ ಅವರು, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಕನಸಿನ ದೀಪಗಳನ್ನು ಬೆಳಗಿಸುವ ಬ್ರಿಟನ್ ಅನ್ನು ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡಿದರು.

‘ಈ ರಾತ್ರಿ 10 ಡೌನಿಂಗ್ ಸ್ಟ್ರೀಟ್‌ನ ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಅದ್ಭುತ ಅನುಭವವಾಗಿದೆ. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಕನಸಿನ ದೀಪಗಳನ್ನು ಬೆಳಗಿಸುವ ಹಾಗೂ ಭವಿಷ್ಯವನ್ನು ಭರವಸೆಯಿಂದ ನೋಡುವಂತಹ ಬ್ರಿಟನ್ ಅನ್ನು ನಿರ್ಮಿಸಲು ಬೇಕಾದ ಎಲ್ಲವನ್ನೂ ನಾನು ಮಾಡುತ್ತೇನೆ. ಎಲ್ಲರಿಗೂ #ದೀಪಾವಳಿ ಹಬ್ಬದ ಶುಭಾಶಯಗಳು!’ಎಂದು ಟ್ವೀಟ್ ಮಾಡಿದ್ದು, ದೀಪಾವಳಿ ಆಚರಣೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಸೋಮವಾರ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ 42 ವರ್ಷದ ರಿಷಿ ಸುನಕ್, ಮಂಗಳವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದರು. 210 ವರ್ಷಗಳಲ್ಲೇ ಬ್ರಿಟನ್‌ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಖ್ಯಾತಿಗೆ ರಿಷಿ ಪಾತ್ರರಾಗಿದ್ದಾರೆ.

ಈ ಮಧ್ಯೆ, ಇಂದು ಮೊದಲ ಸಚಿವ ಸಂಪುಟ ಸಭೆಯನ್ನು ರಿಷಿ ಸುನಕ್ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ, ಡೌನಿಂಗ್ ಸ್ಟ್ರೀಟ್ ಭಾಷಣದ ವಿಡಿಯೊವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು, ನಾನು ನಮ್ಮ ದೇಶವನ್ನು ಮಾತಿನಿಂದಲ್ಲ, ತನ್ನ ಕೆಲಸದಿಂದ ಒಗ್ಗೂಡಿಸುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಒಳಿತಿಗಾಗಿ ದಿನವಿಡೀ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.