ಬೈರುತ್: ಟರ್ಕಿ ಬೆಂಬಲಿತ ಹೋರಾಟಗಾರರು ಉತ್ತರ ಸಿರಿಯಾದ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನರು ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅರೆ ವೈದ್ಯಕೀಯ ಗುಂಪು ವರದಿ ಮಾಡಿದೆ.
ಇತ್ತೀಚೆಗೆ ಟರ್ಕಿ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಸಿರಿಯನ್ ಪಡೆಗಳು ಮತ್ತು ಯುಎಸ್ ಬೆಂಬಲಿತ ಕುರ್ದಿಶ್ ಹೋರಾಟಗಾರರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಅಲ್-ಬಾಬ್ ಪಟ್ಟಣದ ಮೇಲೆ ಈ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.