ADVERTISEMENT

ಉಕ್ರೇನ್‌ನ ಮರಿಯುಪೋಲ್‌ ನಗರದ ಸಂಪೂರ್ಣ ಹಿಡಿತ ಸಾಧಿಸಿದ್ದೇವೆ: ರಷ್ಯಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 2:47 IST
Last Updated 17 ಏಪ್ರಿಲ್ 2022, 2:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಸ್ಕೊ: ಉಕ್ರೇನ್‌ನ ಮರಿಯುಪೋಲ್‌ ನಗರ ಪ್ರದೇಶವನ್ನು ಉಕ್ರೇನ್ ಸೇನಾ ಪಡೆಗಳು ಮತ್ತು ವಿದೇಶಿ ಸೇನಾ ಸಿಬ್ಬಂದಿಯಿಂದ ಸಂಪೂರ್ಣವಾಗಿ ವಶಕ್ಕೆ ಪಡೆದಿರುವುದಾಗಿ ರಷ್ಯಾದ ಮಿಲಿಟರಿ ತಿಳಿಸಿದೆ.

ಅಜೋವ್ಸ್ಟಾಲ್ ಕಬ್ಬಿಣ ಮತ್ತು ಸ್ಟೀಲ್ ವರ್ಕ್ಸ್ ಪ್ಲಾಂಟ್‌ನಲ್ಲಿನ ಉಕ್ರೇನ್ ಸೇನಾಪಡೆಗಳ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ನಗರದ ಮೇಲೆ ದಾಳಿ ನಡೆಸುವ ವೇಳೆ 1,464 ಉಕ್ರೇನ್ ಯೋಧರು ಶರಣಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.

ರಷ್ಯಾ -ಉಕ್ರೇನ್ ಸಂಘರ್ಷದಲ್ಲಿ ಅಜೋವ್ ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಮರಿಯುಪೋಲ್‌ ಅತ್ಯಂತ ಕೆಟ್ಟ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಕ್ಸಿನ್ಹುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ನಗರವನ್ನು ಮುತ್ತಿಗೆ ಹಾಕಿದ ಸುಮಾರು ಏಳು ವಾರಗಳ ನಂತರವೂ ತನ್ನ ಪಡೆಗಳು ಮಾರಿಯುಪೋಲ್‌ನಲ್ಲಿ ರಷ್ಯಾ ಪಡೆಗಳ ವಿರುದ್ಧ ಹೋರಾಡುತ್ತಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಮರಿಯುಪೋಲ್‌ನಲ್ಲಿ ಉಕ್ರೇನ್ ಸೇನೆಯನ್ನು ನಿರ್ಮೂಲನೆ ಮಾಡುವುದರಿಂದ ರಷ್ಯಾದೊಂದಿಗಿನ ಯಾವುದೇ ಮಾತುಕತೆಯು ಕೊನೆಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಏಳು ವಾರಗಳ ಯುದ್ಧದಲ್ಲಿ ಸುಮಾರು 2,500ರಿಂದ 3,000 ಉಕ್ರೇನ್‌ ಸೈನಿಕರು ಹುತಾತ್ಮರಾಗಿದ್ದಾರೆ. ಸುಮಾರು 10 ಸಾವಿರ ಯೋಧರು ಗಾಯಗೊಂಡಿದ್ದಾರೆ. ಹಾಗೆಯೇ ನಮ್ಮ ಸೇನೆ, ರಷ್ಯಾದ ಸುಮಾರು 20 ಸಾವಿರ ಆಕ್ರಮಣಕಾರರನ್ನು ಕೊಂದಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.