ಕೀವ್): ಉಕ್ರೇನ್ ಮೇಲಿನ ದಾಳಿ ತೀವ್ರಗೊಳಿಸಿರುವ ರಷ್ಯಾ, ಮಂಗಳವಾರ ರಾತ್ರಿ ಮದ್ದುಗುಂಡು ಸಜ್ಜಿತವಾದ ಬರೊಬ್ಬರಿ 728 ಡ್ರೋನ್‌ಗಳು ಹಾಗೂ 13 ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ 8 ಜನರು ಮೃತಪಟ್ಟಿದ್ಧಾರೆ ಎಂದು ಉಕ್ರೇನ್ ಬುಧವಾರ ಹೇಳಿದೆ.
ವಾಯವ್ಯ ಉಕ್ರೇನ್‌ನ ಲುಟ್ಸ್‌ಕ್ ನಗರ, ನೆರೆಯ ರಾಷ್ಟ್ರಗಳಾದ ಪೋಲಂಡ್ ಮತ್ತು ಬೆಲರೂಸ್ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಇವುಗಳ ಹೊರತಾಗಿ 10 ಪ್ರದೇಶಗಳೂ ದಾಳಿಗೆ ಒಳಗಾಗಿವೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ಲುಟ್ಸ್‌ಕ್ ನಗರದಲ್ಲಿ ಉಕ್ರೇನ್ ಸೇನಾಪಡೆಗಳ ನೆಲೆಗಳಿವೆ. ಸರಕು ಸಾಗಣೆ ವಿಮಾನಗಳು ಹಾಗೂ ಯುದ್ಧ ವಿಮಾನಗಳ ದೈನಂದಿನ ತರಬೇತಿಗೆ ಈ ನೆಲೆ ಬಳಸಲಾಗುತ್ತದೆ.
ರಷ್ಯಾದ 296 ಡ್ರೋನ್ ಹಾಗೂ 7 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದೂ ಉಕ್ರೇನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.