ADVERTISEMENT

ಉಕ್ರೇನ್‌ ವಿದ್ಯುತ್‌ ಘಟಕದ ಮೇಲೆ ರಷ್ಯಾ ಭೀಕರ ದಾಳಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 14:55 IST
Last Updated 23 ಮಾರ್ಚ್ 2024, 14:55 IST
...
...   

ಕೀವ್‌: ರಷ್ಯಾ ಸೇನೆ ಉಕ್ರೇನ್‌ನ ವಿದ್ಯುತ್‌ ಕ್ಷೇತ್ರದ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಶುಕ್ರವಾರ ಭೀಕರ ದಾಳಿ ನಡೆಸಿದ್ದು, ಐವರು ಮೃತಪಟ್ಟಿದ್ದಾರೆ.

‘60ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು 90 ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ದೇಶದ ಮೇಲೆ ಯುದ್ಧ ಸಾರಿದ ನಂತರ ರಷ್ಯಾ ನಡೆಸಿರುವ ಅತ್ಯಂತ ಭೀಕರ ದಾಳಿ ಇದಾಗಿದೆ’ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ. 

ಹಲವು ನಗರಗಳು ಕತ್ತಲೆಯಲ್ಲಿ ಮುಳುಗಿದ್ದು, ದೇಶದ ಅತಿ ದೊಡ್ಡ ಹೈಡ್ರೊ ಎಲೆಕ್ಟ್ರಿಕ್‌ ಘಟಕಕ್ಕೆ ಹಾನಿಯಾಗಿದೆ. ಯುದ್ಧದ ಹಿನ್ನೆಲೆ ಅಣುಸ್ಥಾವರಕ್ಕೆ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಈ ದಾಳಿಯು, ಇತ್ತೀಚೆಗೆ ಮತ್ತೊಮ್ಮೆ ಅಧಿಕಾರಕ್ಕೆ ಏರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಯುದ್ಧವನ್ನು ತೀವ್ರಗೊಳಿಸಲಿದ್ದಾರೆ ಎಂಬುದರ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.