ADVERTISEMENT

ಪುಟಿನ್‌ ಭಾರತ ಭೇಟಿ: ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ಪಿಟಿಐ
Published 2 ಡಿಸೆಂಬರ್ 2025, 14:09 IST
Last Updated 2 ಡಿಸೆಂಬರ್ 2025, 14:09 IST
ವ್ಲಾದಿಮಿರ್‌ ಪುಟಿನ್‌
ವ್ಲಾದಿಮಿರ್‌ ಪುಟಿನ್‌   

ಮಾಸ್ಕೊ: ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಇದೇ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದಕ್ಕೆ ರಷ್ಯಾ ಸಂಸತ್‌ನ ಕೆಳಮನೆ (ಡುಮಾ) ಮಂಗಳವಾರ ಅನುಮೋದನೆ ನೀಡಿದೆ.

‘ಭಾರತದೊಂದಿಗೆ ರಷ್ಯಾ ಸಮಗ್ರ ದ್ವಿಪಕ್ಷೀಯ ಸಂಬಂಧ ಹೊಂದಿದೆ. ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಿರುವುದು ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ’ ಎಂದು ಡುಮಾ ಸ್ಪೀಕರ್ ವ್ಯಚೆಸ್ಲಾವ್ ವೊಲೊಡಿನ್ ಸದನ ಉದ್ದೇಶಿಸಿ ಹೇಳಿದರು.

ಅಗತ್ಯದ ಸಂದರ್ಭಗಳಲ್ಲಿ, ರಷ್ಯಾ ತನ್ನ ಯುದ್ಧನೌಕೆಗಳು, ಯುದ್ಧವಿಮಾನಗಳು ಸೇರಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸುವುದು. ಇದೇ ರೀತಿ ಭಾರತ ಕೂಡ ರಷ್ಯಾಕ್ಕೆ ನೆರವು ನೀಡುವ ಅಂಶಗಳನ್ನು ಈ ಒಪ್ಪಂದ ಒಳಗೊಂಡಿದೆ.

ADVERTISEMENT

ಉಭಯ ದೇಶಗಳು ಪರಸ್ಪರ ವಾಯುಪ್ರದೇಶ ಹಾಗೂ ಬಂದರುಗಳನ್ನು ಬಳಸುವುದಕ್ಕೆ ಕೂಡ ಈ ಒಪ್ಪಂದ ಅವಕಾಶ ಒದಗಿಸುತ್ತದೆ ಎಂದು ಡುಮಾ ಜಾಲತಾಣದಲ್ಲಿ ಪ್ರಕಟಿಸಿರುವ ಟಿಪ್ಪಣಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.