ADVERTISEMENT

ರಷ್ಯಾ ಪತ್ರಿಕೆಯ ಪರವಾನಗಿ ರದ್ದು: ಸರ್ಕಾರದ ಕ್ರಮ ಎತ್ತಿಹಿಡಿದ ಕೋರ್ಟ್‌

ಏಜೆನ್ಸೀಸ್
Published 5 ಸೆಪ್ಟೆಂಬರ್ 2022, 15:47 IST
Last Updated 5 ಸೆಪ್ಟೆಂಬರ್ 2022, 15:47 IST
.
.   

ಮಾಸ್ಕೊ: ರಷ್ಯಾದ ಹೆಸರಾಂತ ಪತ್ರಿಕೆ ‘ನೊವಯ ಗೆಜೆಟ’ದ ಪರವಾನಗಿ ರದ್ದು ಮಾಡಿರುವ ಸರ್ಕಾರದ ಕ್ರಮವನ್ನು ಇಲ್ಲಿನ ನ್ಯಾಯಾಲಯ ಸೋಮವಾರ ಎತ್ತಿಹಿಡಿದಿದೆ. ಪತ್ರಿಕೆಯುಉಕ್ರೇನ್‌ ವಿರುದ್ಧ ಯುದ್ಧ ಸಾರಿರುವ ರಷ್ಯಾ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿತ್ತು.‌

ಉಕ್ರೇನ್‌ ವಿರುದ್ಧ ನಡೆಯುತ್ತಿರುವುದು ‘ವಿಶೇಷ ಸೇನಾ ಕಾರ್ಯಾಚರಣೆ’ ಹೊರತು ಯುದ್ಧವಲ್ಲ ಎನ್ನುವ ಸರ್ಕಾರದ ನಿಲುವನ್ನು ಒಪ್ಪದಿದ್ದಕ್ಕಾಗಿ ಪತ್ರಿಕೆಯ ಪರವಾನಗಿಯನ್ನು ಸರ್ಕಾರ ಇತ್ತೀಚೆಗೆ ರದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪತ್ರಿಕೆಯ ಸಂಪಾದಕ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಡಿಮಿಟ್ರಿ ಮೊರಟೊ, ‘ಇದೊಂದು ರಾಜಕೀಯ ನಡೆ. ಜೊತೆಗೆ, ಈ ಕ್ರಮದಲ್ಲಿ ಎಳ್ಳಷ್ಟು ನ್ಯಾಯವಿಲ್ಲ’ ಎಂದಿದ್ದಾರೆ.

‘ನೊವಯ ಗೆಜೆಟ’ ತನ್ನ ಸುದ್ದಿಮನೆಯ ನಿಯಮಾವಳಿಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ದೂರಿ ರಷ್ಯಾ ಮಾಧ್ಯಮ ಮತ್ತು ಅಂತರ್ಜಾಲ ನಿಯಂತ್ರಣ ಸಂಸ್ಥೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.