ADVERTISEMENT

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ 1,351 ಸೈನಿಕರ ಸಾವು: ರಷ್ಯಾದ ಅಧಿಕೃತ ಮಾಹಿತಿ

ಏಜೆನ್ಸೀಸ್
Published 25 ಮಾರ್ಚ್ 2022, 16:53 IST
Last Updated 25 ಮಾರ್ಚ್ 2022, 16:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಾಸ್ಕೊ: ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆಯ 1,351 ಸೈನಿಕರುಸಾವಿಗೀಡಾಗಿದ್ದಾರೆ ಎಂದು ರಷ್ಯಾದಸೇನಾ ಪಡೆಗಳ ಉಪ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 3,825ಯೋಧರುಗಾಯಗೊಂಡಿದ್ದಾರೆ ಎಂದು ಜನರಲ್ ಸೆರ್ಗೆಯ್ ರುಡ್‌ಸ್ಕೊಯ್‌ತಿಳಿಸಿದರು.

ಉಕ್ರೇನ್‌ನಲ್ಲಿ ನಡೆದಿರುವ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರುಮೃತಪಟ್ಟಿದ್ದಾರೆ ಎಂದುನ್ಯಾಟೊಬುಧವಾರ ಅಂದಾಜಿಸಿತ್ತು.

ADVERTISEMENT

ಪೂರ್ವ ಉಕ್ರೇನ್‌ನಲ್ಲಿ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತುರಾಷ್ಟ್ರೀಯ ಗಾರ್ಡ್‌ನಂಥ ಪಡೆಗಳಲ್ಲಿ ಆಗಿರುವಸಾವು ನೋವುಗಳುಈ ಅಂಕಿ ಅಂಶಗಳಲ್ಲಿ ಸೇರಿಲ್ಲ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.