ADVERTISEMENT

ಉಕ್ರೇನ್‌ನ 158 ಡ್ರೋನ್‌ಗಳನ್ನು ಹೊಡೆದುರುಳಿಸಿದ ರಷ್ಯಾ

ಶೆಲ್‌ ದಾಳಿಯಿಂದ ಒಬ್ಬನ ಸಾವು, ಹಲವರಿಗೆ ಗಾಯ

ಏಜೆನ್ಸೀಸ್
Published 1 ಸೆಪ್ಟೆಂಬರ್ 2024, 14:13 IST
Last Updated 1 ಸೆಪ್ಟೆಂಬರ್ 2024, 14:13 IST
<div class="paragraphs"><p>ಡ್ರೋನ್</p></div>

ಡ್ರೋನ್

   

(ರಾಯಿಟರ್ಸ್ ಸಾಂದರ್ಭಿಕ ಚಿತ್ರ)

ಮಾಸ್ಕೊ: ರಷ್ಯಾದ ವಾಯುಪಡೆಯು ಉಕ್ರೇನ್‌ನ 158 ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ADVERTISEMENT

‘ಮಾಸ್ಕೊದಲ್ಲಿ 2, ಮಾಸ್ಕೊದ ಹೊರವಲಯದಲ್ಲಿ 9 ಮತ್ತು ಕುರ್ಸ್‌ಕ್‌ ಪ್ರದೇಶದಲ್ಲಿ 46, ಬ್ರ್ಯಾನ್ಸ್‌ಕ್‌ನಲ್ಲಿ 34, ವೊರೊನೆಜ್‌ನಲ್ಲಿ 28, ಬೆಲ್ಗೊರೊಡ್‌ನಲ್ಲಿ 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

‘ಡ್ರೋನ್‌ನ ಅವಶೇಷಗಳು ಬಿದ್ದ ಪರಿಣಾಮ ನಗರದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಹತ್ತಿಕೊಂಡಿದೆ’ ಎಂದು ಮಾಸ್ಕೊದ ಮೇಯರ್‌ ಸೆರ್ಗಿ ಸೊಬಯೆನಿನ್‌ ಅವರು ಮಾಹಿತಿ ನೀಡಿದ್ದಾರೆ.

ವರ್ಷದ ಆರಂಭದಿಂದ ತೈಲಸಂಸ್ಕರಣಾ ಘಟಕ ಮತ್ತು  ಟರ್ಮಿನಲ್‌ಗಳ ಮೇಲೆ ಪದೇ ಪದೇ ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ಉಕ್ರೇನ್‌ ರಷ್ಯಾಕ್ಕೆ ಸೆಡ್ಡು ಹೊಡೆಯುತ್ತಿದೆ.

‘ಉಕ್ರೇನ್ ಒಳಗೆ ಬಂದಿದ್ದ ರಷ್ಯಾದ 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

‘ರಷ್ಯಾದ ಶೆಲ್‌ ದಾಳಿಯಿಂದಾಗಿ ಸುಮಿ ಪ್ರದೇಶದಲ್ಲಿ ಒಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈಶಾನ್ಯ ಹಾರ್ಕಿವ್‌ನಲ್ಲಿಯೂ ಐವರು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ಕಠಿಣವಾಗಿದೆ: ಉಕ್ರೇನ್

ಕೀವ್‌: ‘ರಷ್ಯಾವು ಪದೇ ಪದೇ ದಾಳಿ ನಡೆಸುತ್ತಿದ್ದು ಪರಿಸ್ಥಿತಿ ಕಠಿಣವಾಗಿದೆ’ ಎಂದು ಉಕ್ರೇನ್‌ ಸೇನೆಯ ಉನ್ನತ ಕಮಾಂಡರ್‌ ಅಲೆಕ್ಸಾಂಡರ್‌ ಸಿರ್ಸ್‌ಕಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘ಉಕ್ರೇನ್‌ನ ಪೂರ್ವ ಭಾಗವನ್ನು ರಷ್ಯಾ ಗುರಿಯಾಗಿಸಿಕೊಂಡಿದೆ. ಅಲ್ಲಿನ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ‘ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.