ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ 40 ಮಂದಿ ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್‌ನತ್ತ ತೆರಳಿದ್ದಾರೆ.
ಸ್ವದೇಶಕ್ಕೆ ಮರಳುವುದಕ್ಕಾಗಿ 40 ಮಂದಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಉಕ್ರೇನ್–ಪೋಲೆಂಡ್ ಗಡಿಯತ್ತ ತೆರಳುತ್ತಿದೆ. ವಿದ್ಯಾರ್ಥಿಗಳನ್ನು ಕಾಲೇಜು ಬಸ್ಸಿನ ಮೂಲಕ ಗಡಿಯಿಂದ 8 ಕಿ.ಮೀ.ದೂರದ ವರೆಗೂ ಬಿಡಲಾಗಿತ್ತು. ಅಲ್ಲಿಂದ ಅವರು ಕಾಲ್ನಡಿಗೆ ಮೂಲಕ ಗಡಿಯತ್ತ ತೆರಳುತ್ತಿದ್ದಾರೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಭೀತಿ ಹುಟ್ಟಿಸುವ ಸೈರನ್, ಯುದ್ದ ವಿಮಾನಗಳ ಹಾರಾಟ....
ಪೋಲೆಂಡ್ ದೇಶದ ಗಡಿ ಭಾರತೀಯರಿಗೆ ಮುಕ್ತವಾಗಿದೆ ಎನ್ನಲಾಗಿದ್ದು, ಆ ದೇಶದ ಮೂಲಕ ಭಾರತಕ್ಕೆ ವಾಪಸಾಗಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.