ಉಕ್ರೇನ್ ಮೇಲೆ ಹಿಡಿತ ಸಾಧಿಸುವ ಪಣ ತೊಟ್ಟಿರುವ ರಷ್ಯಾ, ನಿರೀಕ್ಷೆಯಂತೆ ಸಂಪೂರ್ಣ ಮಿಲಿಟರಿಯೊಂದಿಗೆ ಉಕ್ರೇನ್ ಮೇಲೆರಗಿದೆ. ಈ ವಿದ್ಯಮಾನ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿಬಿಡಬಹುದೇ? ಎಂದು ವಿಶ್ವ ಸಮುದಾಯ ಕಳವಳಪಡುತ್ತಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಆದೇಶದಂತೆ ಸುಮಾರು 1 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರುಗುರುವಾರ ಬೆಳಗಿನ ಜಾವ ಉಕ್ರೇನ್ ಗಡಿಗೆ ಮುತ್ತಿಗೆ ಹಾಕಿದ್ದಾರೆ. ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ (ಕೀವ್, ಖಾರ್‌ಕೀವ್) ಕ್ಷಿಪಣಿ ದಾಳಿಯನ್ನು ರಷ್ಯಾ ನಡೆಸಿದೆ. ಸಾವು–ನೋವು ಆಗಿದ್ದು, ಆಸ್ತಿ–ಪಾಸ್ತಿ ನಷ್ಟವಾಗಿದೆ.
ಈ ಎರಡೂ ದೇಶಗಳ ಸೇನಾ ಬಲ ಹೋಲಿಸಿ ನೋಡುವುದಾದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಅದಾಗ್ಯೂ ರಷ್ಯಾ ವಿರುದ್ಧ ಉಕ್ರೇನ್ ಪ್ರಬಲ ಪ್ರತಿರೋಧ ತೋರುತ್ತಿದೆ.
ಇನ್ನೊಂದೆಡೆ ಯುರೋಪ್ ಒಕ್ಕೂಟ ಉಕ್ರೇನ್ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ರಷ್ಯಾದ ಸೇನಾ ಬಲದ ಮುಂದೆ ಯುರೋಪ್ ಒಕ್ಕೂಟ ರಾಷ್ಟ್ರಗಳ ಸೇನಾ ಬಲವೂ ಕಡಿಮೆಯೇ ಎನ್ನುವುದು ತಜ್ಞರ ವಿಶ್ಲೇಷಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.