ADVERTISEMENT

ಹೊಸ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ಹೇಳಿದ ಉಕ್ರೇನ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 9:47 IST
Last Updated 10 ಮಾರ್ಚ್ 2022, 9:47 IST
ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ   

ಕೀವ್: ಉಕ್ರೇನ್‌ ನಗರಗಳಲ್ಲಿ ಹೊಸದಾಗಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲಾಗುವುದು ಎಂದು ಉಕ್ರೇನ್ ಸರ್ಕಾರ ಹೇಳಿರುವುದಾಗಿ ಗುರುವಾರ (ಮಾ. 10) ವರದಿಯಾಗಿದೆ.

ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲುಹತ್ತು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಉಕ್ರೇನ್ ಎದುರು ನೋಡುತ್ತಿದೆ ಎಂದು 'ದಿ ಕೀವ್ ಇಂಡಿಪೆಂಡೆಂಟ್' ವರದಿ ಮಾಡಿದೆ.

'ನಾವು ಟ್ರೊಸ್ಟಿನೆಟ್ಸ್‌, ಕ್ರಾಸ್ನೋಪಿಲ್ಯಾ ಹಾಗೂ ಸುಮಿ ನಗರಗಳಿಂದ ಪೊಲ್ಟಾವಾ ನಗರದ ಕಡೆಗೆ ಮಾನವೀಯ ಕಾರಿಡಾರ್‌ಗಳನ್ನು ತೆರಯಲಿದ್ದೇವೆಎಂದು ಉಕ್ರೇನ್ ಉಪ ಪ್ರಧಾನಿ ಇರ್ಯಾನ್ ವೆರೆಶ್ಚುಕ್‌ ಹೇಳಿರುವುದಾಗಿ 'ಸ್ಪುಟ್ನಿಕ್' ಸುದ್ದಿಸಂಸ್ಥೆ ಪ್ರಕಟಿಸಿದೆ.

ADVERTISEMENT

ಮರಿಯುಪೋಲ್, ವೊಲ್ನೊವಾಖಾ, ಇಝಿಯುಮ್, ಬುಕಾ, ಬೊರೊದ್ಯಾಂಕ, ಇರ್ಪಿನ್ ಮತ್ತು ಹೊಸ್ಟೊಮೆಲ್‌ ನಗರಗಳಿಂದಲೂ ಕಾರಿಡಾರ್‌ ಕಾರ್ಯಾಚರಿಸಲಿವೆ ಎಂದೂ ಇರ್ನಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.