ADVERTISEMENT

ಡಾನ್‌ಬಾಸ್‌–ಕ್ರಿಮಿಯಾ ನೇರ ಮಾರ್ಗ: ರಷ್ಯಾದ ರಕ್ಷಣಾ ಸಚಿವ ಸರ್ಗೈ ಶೋಯಿಗು

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 20:18 IST
Last Updated 7 ಜೂನ್ 2022, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌/ಮಾಸ್ಕೊ/ಬರ್ಲಿನ್‌ (ರಾಯಿಟರ್ಸ್‌/ಎಎಫ್‌ಪಿ): ಉಕ್ರೇನಿನ ಆಗ್ನೇಯ ಭಾಗದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದು, ಈ ಹಿಂದೆ ವಶಪಡಿಸಿಕೊಂಡಿರುವ ಕ್ರಿಮಿಯಾಕ್ಕೆ ಭೂ ಪ್ರದೇಶದ ಮೂಲಕ ನೇರ ಸಂಪರ್ಕ ಕೊಂಡಿಯನ್ನು ಬೆಸೆಯಲಾಗಿದೆ ಎಂದು ರಷ್ಯಾ ಘೋಷಿಸಿದೆ.

ರಷ್ಯಾದ ವಶದಲ್ಲಿರುವ ಡಾನ್‌ ಬಾಸ್‌ ಪ್ರದೇಶದ ಮೂಲಕ ಕ್ರಿಮಿಯಾಕ್ಕೆ ರಸ್ತೆ ಮಾರ್ಗ ಹಾದುಹೋಗಿದೆ ಎಂದುರಷ್ಯಾದ ರಕ್ಷಣಾ ಸಚಿವ ಸರ್ಗೈ ಶೋಯಿಗು ಮಂಗಳವಾರ ತಿಳಿಸಿರುವುದಾಗಿ‘ದಿ ಕೀವ್‌ ಇಂಡಿಪೆಂ ಡೆಂಟ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

ಪರಿಸ್ಥಿತಿ ಉದ್ವಿಗ್ನ: ಯುದ್ಧ ಕೇಂದ್ರಿತ ಸೆವೆರೊಡೊನೆಟ್‌ಸ್ಕ್‌ ನಗರ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ಕಾದಾಟದಿಂದ ಇಡೀ ನಗರದ ಮೂಲಸೌಕರ್ಯಗಳು ಅಸ್ತವ್ಯಸ್ತಗೊಂಡಿವೆ.

ADVERTISEMENT

ನಗರದಲ್ಲಿ ಭೀಕರ ಸ್ವರೂಪದ ಯುದ್ಧ ಮುಂದುವರಿದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಬೃಹತ್‌ ಫಿರಂಗಿಗಳು ಮತ್ತು ಯುದ್ಧೋಪಕರಣಗಳೊಂದಿಗೆ ರಷ್ಯಾ ಸೈನಿಕರು ಬೀಡು ಬಿಟ್ಟಿದ್ದು, ದಾಳಿಗೆ ಪ್ರಯತ್ನಿಸುತ್ತಾರೆ. ಅವರನ್ನು ಹಿಮ್ಮೆಟ್ಟಿಸಲು ಉಕ್ರೇನ್‌ ಪಡೆಪ್ರಯತ್ನಿಸುತ್ತಿದೆ ಎಂದು ನಗರದ ಮೇಯರ್ ಒಲೆಕ್ಸಾಂಡರ್ ಸ್ಟ್ರೈಕ್ ಹೇಳಿದರು.

2,500 ಸೈನಿಕರು ರಷ್ಯಾ ಸೆರೆಯಲ್ಲಿ: ಮರಿಯುಪೊಲ್‌ನ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರದ ರಕ್ಷಣೆ ಮಾಡುತ್ತಿದ್ದ 2,500 ಯೋಧರು ರಷ್ಯಾ ಸೇನೆಯ ಸೆರೆಯಲ್ಲಿದ್ದಾರೆ. ಈಗ ಅವರು ಸಾಮಾನ್ಯ ಕೈದಿಗಳು. ಅವರಿಗೆ ಚಿತ್ರ ಹಿಂಸೆ ನೀಡುವುದು ರಷ್ಯಾದ ಆದ್ಯತೆಯಲ್ಲ ಎಂದು ಭಾವಿಸಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.