ಉಕ್ರೇನ್‌ನತ್ತ ದಾಳಿ ನಡೆಸುತ್ತಿರುವ ಯೋಧ
ರಾಯಿಟರ್ಸ್ ಚಿತ್ರ
ಕೀವ್: ರಷ್ಯಾದ ಪಡೆಗಳು ಬುಧವಾರ ರಾತ್ರಿ ಉಕ್ರೇನ್‌ನಾದ್ಯಂತ ಡ್ರೋನ್ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟಿದ್ದು, 60 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಿಂದ ಉಕ್ರೇನ್‌ನ ಖಾರ್ಕಿವ್ ನಗರವು ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ ರಷ್ಯಾದ 17 ಡ್ರೋನ್‌ಗಳು ಎರಡು ಜನವಸತಿ ಜಿಲ್ಲೆಗಳ ಮೇಲೆ ದಾಳಿ ನಡೆಸಿವೆ ಎಂದು ಮೇಯರ್ ಇಹೋರ್ ಟೆರೆಖೋವ್ ತಿಳಿಸಿದ್ದಾರೆ.
ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 2ರಿಂದ 15 ವರ್ಷದೊಳಗಿನ ಒಂಬತ್ತು ಮಕ್ಕಳು ಸೇರಿದಂತೆ 60 ಜನರು ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ ಪ್ರಾದೇಶಿಕ ಮುಖ್ಯಸ್ಥರು ದೃಢಪಡಿಸಿದ್ದಾರೆ.
‘ಶಾಂತಿಯುತವಾಗಿ ಜೀವನ ನಡೆಸುತ್ತಿರುವ ತಾಣಗಳನ್ನು ಗುರಿಯಾಗಿಸಿಕೊಂಡು ಎಂದಿಗೂ ದಾಳಿ ಮಾಡಬಾರದು’ ಎಂದು ಟೆರೆಖೋವ್ ಅವರು ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.