ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ರಷ್ಯಾ– ಉಕ್ರೇನ್ ಯುದ್ಧ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳ ವಿದ್ಯಮಾನಗಳ ಕುರಿತು ಚರ್ಚಿಸಲಿದ್ದಾರೆ ಎಂದು ‘ಕ್ರೆಮ್ಲಿನ್’ ಬುಧವಾರ ಹೇಳಿದೆ.
ಕತಾರ್ ದೊರೆ ಶೇಕ್ ತಮೀಮ್ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅವರು ಪುಟಿನ್ ಅವರೊಂದಿಗೆ ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಸಂಧಾನ ನಡೆಸಲು ಕತಾರ್ ಹಲವು ಬಾರಿ ಯತ್ನಿಸಿದೆ. ಯುದ್ಧದಿಂದಾಗಿ ಪೋಷಕರಿಂದ ದೂರವಾಗಿದ್ದ ಉಭಯ ದೇಶಗಳ ಮಕ್ಕಳನ್ನು ಮರಳಿಸುವಲ್ಲಿಯೂ ಕತಾರ್ ಸಹಾಯ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.