ADVERTISEMENT

ರಷ್ಯಾ ಶೆಲ್ ದಾಳಿ: ಉಕ್ರೇನ್‌ನ ನಾಲ್ವರು ಸಾವು

ಏಜೆನ್ಸೀಸ್
Published 25 ಡಿಸೆಂಬರ್ 2023, 13:58 IST
Last Updated 25 ಡಿಸೆಂಬರ್ 2023, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್: ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಮೇಲೆ ರಷ್ಯಾ ಭಾನುವಾರ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ವಯೋವೃದ್ಧರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 

ಇದೇ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಣೆ ಮಾಡಲು ಉಕ್ರೇನ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಇದಕ್ಕೂ ಮುನ್ನಾ ದಿನವೇ ರಷ್ಯಾ ಶೆಲ್ ದಾಳಿ ನಡೆಸಿದೆ. ಈ ಮೊದಲು ಉಕ್ರೇನ್‌ನಲ್ಲಿ ಜನವರಿ 7ರಂದು ಕ್ರಿಸ್‌ಮಸ್‌ ಆಚರಿಸಲಾಗಿತ್ತು. 

ಈ ದಾಳಿಯಿಂದಾಗಿ ಕೆಲವು ಮನೆಗಳು ಮತ್ತು ಖಾಸಗಿ ವೈದ್ಯಕೀಯ ಕೇಂದ್ರಕ್ಕೆ ಬೆಂಕಿ ತಗುಲಿದ್ದು, 15 ವರ್ಷದ ಮಗು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸೇನಾ ಆಡಳಿತದ ಮುಖ್ಯಸ್ಥ ಒಲೆಕ್‌ಸಂದರ್ ಪ್ರೊಕುದಿನ್ ತಿಳಿಸಿದ್ದಾರೆ. 

ADVERTISEMENT

ರಷ್ಯಾ ಭಾನುವಾರ ಉಕ್ರೇನ್‌ನ ಖೆರ್ಸಾನ್ ಪ್ರಾಂತ್ಯದ ಜೊತೆಗೆ ಮೈಕೋಲೇವ್, ಕಿರೊವೊಹ್ರಾಡ್, ಝಪೊರಿಝ್ಯಾ, ನಿಪ್ರೊಪೆಟ್ರೊವ್‌ಸ್ಕ್ ಮತ್ತು ಮೆಲ್‌ನಿಟ್‌ಸ್ಕಿ ಪ್ರಾಂತ್ಯಗಳ ಮೇಲೂ ಇರಾನ್ ನಿರ್ಮಿತ 14 ಡ್ರೋನ್‌ಗಳು ಸೇರಿದಂತೆ ಒಟ್ಟಾರೆ 15 ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಉಕ್ರೇನ್ ವಾಯುಪಡೆ ಆರೋಪಿಸಿದೆ. 

‘ಶತ್ರುವಿಗೆ ರಜಾ ದಿನವೆಂಬುದೇ ಇಲ್ಲ’ ಎಂದು ಖೆರ್ಸಾನ್ ದಾಳಿ ಕುರಿತು ಉಕ್ರೇನ್ ಅಧ್ಯಕ್ಷರ ಕಚೇರಿ ಮುಖ್ಯಸ್ಥ ಆ್ಯಂಡ್ರಿ ಯೆರ್ಮಾಕ್ ಬೇಸರ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.