ADVERTISEMENT

ಭಾರತ ಸೇರಿ ಮೂರು ರಾಷ್ಟ್ರಗಳಿಗೆ ಅಮೆರಿಕ ರಾಜತಾಂತ್ರಿಕರ ಪ್ರವಾಸ

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:31 IST
Last Updated 10 ಮೇ 2024, 15:31 IST
   

ವಾಷಿಂಗ್ಟನ್: ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದೊಂದಿಗೆ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯು ಮೇ 10ರಿಂದ ಭಾರತ, ಶ್ರೀಲಂಕಾ, ಬಾಂಗ್ಲಾದೇಶದ ಪ್ರವಾಸ ತೆರಳಲಿದ್ದಾರೆ.

ಅಭಿವೃದ್ಧಿಪೂರಕ ಹಾಗೂ ಮುಕ್ತವಾದ ಇಂಡೋ–ಪೆಸಿಫಿಕ್‌ ವಲಯ ರೂಪಿಸಲು ಅಮೆರಿಕದ ಬೆಂಬಲವನ್ನು ದೃಢಪಡಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಅಮೆರಿಕವು ಅಭಿಪ್ರಾಯಪಟ್ಟಿದೆ.

ದಕ್ಷಿಣ ಮತ್ತು ಕೇಂದ್ರ ಏಷ್ಯಾ ವಲಯದ ಇಲಾಖೆ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಮೇ 10ರಂದು ಚೆನ್ನೈನಲ್ಲಿ ಕಾನ್ಸುಲೆಟ್‌ ಕಚೇರಿಯಲ್ಲಿ ಸಭೆ ನಡೆಸುವ ಮೂಲಕ ಈ ಪ್ರವಾಸಕ್ಕೆ ಚಾಲನೆ ನೀಡುವರು ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.