ADVERTISEMENT

ಶಾಂಘೈ ಲಾಕ್‌ಡೌನ್‌: ಮನೆಯಿಂದ ಹೊರ ಬರಲು ಅವಕಾಶ

ಏಜೆನ್ಸೀಸ್
Published 13 ಏಪ್ರಿಲ್ 2022, 9:41 IST
Last Updated 13 ಏಪ್ರಿಲ್ 2022, 9:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ವಿಧಿಸಿರುವ ಕಠಿಣ ಲಾಕ್‌ಡೌನ್‌ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಕೆಲ ನಿವಾಸಿಗಳು ಮನೆಯಿಂದ ಹೊರ ಬರಲು ಅನುವು ಮಾಡಿಕೊಡಲಾಗಿದೆ.

ಎಷ್ಟು ಮಂದಿಗೆ ಮನೆಯಿಂದ ಹೊರ ಬರಲು ಅವಕಾಶ ನೀಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಸೂಪರ್‌ ಮಾರ್ಕೆಟ್‌ ಮತ್ತು ಔಷಧಿ ಮಳಿಗೆಗಳುಪುನರಾರಂಭಗೊಳ್ಳಲಿವೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ.

ಕಠಿಣ ಲಾಕ್‌ಡೌನ್‌ ನಿಂದ ಉಂಟಾದ ಆಹಾರ ಮತ್ತು ಔಷಧಿ ಕೊರತೆ ಜನರನ್ನು ಕೆರಳಿಸಿತ್ತು. ಇದರಿಂದ ಸಾರ್ವಜನಿಕರು ತಂಡೋಪ ತಂಡವಾಗಿ ಮಾಲ್‌ಗಳಿಗೆ ನುಗ್ಗಿದ್ದರು. ಮನೆ ಒಳಗೆಯಿಂದಲೇ ಪಾತ್ರೆಗಳನ್ನು ಬಡಿದು ಪ್ರತಿಭಟಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇಈ ಸಡಿಲಿಕೆ ಘೋಷಿಸಲಾಗಿದೆ.

ADVERTISEMENT

ಈ ಹಿಂದೆ ಸೋಂಕು ವರದಿಯಾಗದ 2,460 ನಿಯಂತ್ರಿತ ಪ್ರದೇಶದ ಜನರಿಗೆ ಮನೆಯಿಂದ ಅವಕಾಶ ಬರಲು ಕಳೆದ ವಾರ ಅವಕಾಶ ನೀಡಲಾಗಿತ್ತು.

ಚೀನಾದಲ್ಲಿ ಸೋಮವಾರ ಮಧ್ಯರಾತ್ರಿ ವೇಳೆಗೆ 24, 659 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 23,387 ಲಕ್ಷಣ ಹೊಂದಿರುವ ಪ್ರಕರಣಗಳು. ಶಾಂಘೈನಲ್ಲಿ 23,346 ಹೊಸ ಪ್ರಕರಣಗಳು ಹಾಗೂ 998 ಲಕ್ಷಣ ಇರುವ ಪ್ರಕರಣಗಳು ದಾಖಲಾಗಿವೆ. ಇಲ್ಲಿ ಇದುವರೆಗೆ 2 ಲಕ್ಷ ಮಂದಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.