ADVERTISEMENT

ಶಾಂಘೈ: ಕೋವಿಡ್‌ನಿಂದ ಏಳು ಸಾವು

ಪಿಟಿಐ
Published 19 ಏಪ್ರಿಲ್ 2022, 15:32 IST
Last Updated 19 ಏಪ್ರಿಲ್ 2022, 15:32 IST
ಶಾಂಘೈ ನಗರದಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಪರೀಕ್ಷೆಗಾಗಿ ವ್ಯಕ್ತಿಯೊಬ್ಬರ ಗಂಟಲು ದ್ರವವನ್ನು ಮಂಗಳವಾರ ಸಂಗ್ರಹಿಸಿದರು –ಎಎಫ್‌ಪಿ ಚಿತ್ರ
ಶಾಂಘೈ ನಗರದಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಪರೀಕ್ಷೆಗಾಗಿ ವ್ಯಕ್ತಿಯೊಬ್ಬರ ಗಂಟಲು ದ್ರವವನ್ನು ಮಂಗಳವಾರ ಸಂಗ್ರಹಿಸಿದರು –ಎಎಫ್‌ಪಿ ಚಿತ್ರ   

ಬೀಜಿಂಗ್‌ (ಪಿಟಿಐ): ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಕೋವಿಡ್‌–19 ನಿಂದಾಗಿ ಮತ್ತೆ ಏಳು ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 21,400 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 4,648 ಕ್ಕೆ ಏರಿದೆ.

‘ಕೋವಿಡ್‌ನಿಂದ ಶಾಂಘೈನಲ್ಲಿ ಸೋಮವಾರ ಏಳು ಮಂದಿ ಮೃತಪಟ್ಟ ವರದಿಯಾಗಿದೆ. ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿವೆ. 2019ರಿಂದ ಈವರೆಗೆ 4,648 ಮಂದಿ ಮೃತಪಟ್ಟಿದ್ದಾರೆ’ ಎಂಬುವುದು ಚೀನಾದ ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ಗೊತ್ತಾಗಿದೆ.

ಮೃತಪಟ್ಟವರು ಹೃದ್ರೋಗ, ರಕ್ತನಾಳ ಸಂಬಂಧಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊಡ್ಡಡ ಹಾಗೂ ಮಿದುಳಿನ ರಕ್ತಸ್ರಾವದಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.