ADVERTISEMENT

ಶಿಂಜೊ ಅಬೆ ಸ್ಥಿತಿ ಗಂಭೀರ: ಜಪಾನ್‌ ಪ್ರಧಾನಿ ಕಿಶಿದಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2022, 7:41 IST
Last Updated 8 ಜುಲೈ 2022, 7:41 IST
ಶಿಂಜೊ ಅಬೆ
ಶಿಂಜೊ ಅಬೆ    

ಟೋಕಿಯೊ: ‘ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಗುಂಡೇಟಿನಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಆದರೆ, ಅವರು ಬದುಕುಳಿಯುವ ವಿಶ್ವಾಸವಿದೆ’ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಹೇಳಿದ್ದಾರೆ.

ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಅಬೆ ಅವರನ್ನು ಕಾಶಿಹರಾ ನಗರದ ನಾರಾ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಏರ್‌ ಆಂಬ್ಯುಲೆನ್ಸ್‌ ಮೂಲಕ ಕರೆದೊಯ್ಯಲಾಗಿದೆ.

ಚುನಾವಣಾ ಪ್ರಚಾರದಲ್ಲಿದ್ದ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ಮತ್ತು ಸಚಿವರು ಅಬೆ ಅವರ ಮೇಲಿನ ದಾಳಿ ವಿಷಯ ತಿಳಿಯುತ್ತಲೇ ಟೋಕಿಯೊಗೆ ದೌಡಾಯಿಸಿದರು.

ADVERTISEMENT

ಪ್ರಧಾನಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಶಿದಾ, ‘ಅಬೆ ಅವರಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅಬೆ ಅವರು ಬದುಕುಳಿಯಬೇಕು ಎಂದು ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ’ ಎಂದರು.

ಅಬೆ ಅವರ ಮೇಲಿನ ದಾಳಿ ಭೀಕರ ಮತ್ತು ಅನಾಗರಿಕ ಎಂದು ಕಿಶಿದಾ ಕರೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಪಾಯವಾದ ಚುನಾವಣೆ ಪ್ರಚಾರದ ಸಂದರ್ಭದಲ್ಲೇ ನಡೆದ ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.