ADVERTISEMENT

ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯಗೆ ಸಿಂಗಪುರದಲ್ಲಿ ಉಳಿಯಲು ಮತ್ತೆ 14 ದಿನ ಅವಕಾಶ

ಪಿಟಿಐ
Published 27 ಜುಲೈ 2022, 6:53 IST
Last Updated 27 ಜುಲೈ 2022, 6:53 IST
ಗೊಟಬಯ ರಾಜಪಕ್ಸ
ಗೊಟಬಯ ರಾಜಪಕ್ಸ   

ಸಿಂಗಪುರ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಮತ್ತೆ 14 ದಿನ ಸಿಂಗಪುರದಲ್ಲಿ ಉಳಿದುಕೊಳ್ಳಲು ಅವಕಾಶ ಸಿಕ್ಕಿದೆ. ಅವರ ವೀಸಾ ಅವಧಿಯನ್ನು ಆಗಸ್ಟ್ 11ರವರೆಗೆ ಅಲ್ಲಿನ ಸರ್ಕಾರ ವಿಸ್ತರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶದಿಂದ ಬೆದರಿದ ರಾಜಪಕ್ಸ ಜುಲೈ 9ರಂದು ಅಲ್ಲಿಂದ ಪಲಾಯನ ಮಾಡಿದ್ದರು.

ರಾಜಪಕ್ಸ ಅವರಿಗೆ ಹೊಸ ವೀಸಾ ನೀಡಲಾಗಿದ್ದು, ಆಗಸ್ಟ್ 11ರವರೆಗೆ ಅವರಿಗೆ ಸಿಂಗಪುರದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ‘ದಿ ಸ್ಟ್ರೈಟ್ಸ್ ಟೈಮ್ಸ್’ ವರದಿ ಮಾಡಿದೆ.

ಶ್ರೀಲಂಕಾವು 1948ರ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ನಿರ್ವಹಿಸುವಲ್ಲಿ ವಿಫಲರಾಗಿದ್ದ ಅಧ್ಯಕ್ಷ ಗೊಟಬಯ ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ಅದ್ಕೂ ಮುನ್ನವೇ ಅವರು ಕುಟುಂಬದ ಜೊತೆ ಮನೆ ತೊರೆದಿದ್ದರು.

ADVERTISEMENT

ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದ ರಾಜಪಕ್ಸ, ಬಳಿಕ ಅಲ್ಲಿಂದ ಸಿಂಗಪುರಕ್ಕೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.