ADVERTISEMENT

ಝಪೋರಿಝ್ಯಾ ಅಣುಸ್ಥಾವರ ಸುರಕ್ಷಿತ: ಚರ್ನೋಬಿಲ್‌ ಮಾದರಿಯ ದುರಂತದ ಆತಂಕ ದೂರ

ಏಜೆನ್ಸೀಸ್
Published 4 ಮಾರ್ಚ್ 2022, 2:52 IST
Last Updated 4 ಮಾರ್ಚ್ 2022, 2:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೀವ್‌: ಝಪೋರಿಝ್ಯಾ ಪರಮಾಣು ವಿದ್ಯುತ್ ಸ್ಥಾವರ ಈಗ ಸುರಕ್ಷಿತವಾಗಿದೆ ಎಂದು ಉಕ್ರೇನ್‌ ಸರ್ಕಾರ ಘೋಷಿಸಿದೆ.

ಉಕ್ರೇನ್‌ ವಿರುದ್ಧ ಯುದ್ಧ ಸಾರಿರುವ ರಷ್ಯಾ, ಶುಕ್ರವಾರ ಅಣುಸ್ಥಾವರದ ಮೇಲೆ ಶೆಲ್‌ ದಾಳಿ ಆರಂಭಿಸಿತ್ತು. ಹೀಗಾಗಿ ಸ್ಥಾವರದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

‘ಈಗ ಪರಮಾಣು ಸ್ಥಾವರ ಸುರಕ್ಷಿತವಾಗಿದೆ ಎಂದು ಸ್ಥಾವರದ ನಿರ್ದೇಶಕರು ಹೇಳಿದ್ದಾರೆ. ಘಟಕದ ತರಬೇತಿ ಕಟ್ಟಡ ಮತ್ತು ಪ್ರಯೋಗಾಲಯವು ಬೆಂಕಿಗೆ ಆಹುತಿಯಾಗಿದೆ ಎಂದು ನಿರ್ವಾಹಕರು ಹೇಳಿದ್ದಾರೆ’ ಎಂದು ಝಪೋರಿಝ್ಯಾ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಮಾಹಿತಿ ನೀಡಿದ್ದಾರೆ.

ADVERTISEMENT

ದಾಳಿಯಲ್ಲಿ, ಸ್ಥಾವರದ ಅಗತ್ಯ ಉಪಕರಣಗಳು ಹಾನಿಗೀಡಾಗಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ವಿಚಕ್ಷಣ ವಿಭಾಗದಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಾವರದಲ್ಲಿವಿಕಿರಣದ ಮಟ್ಟ ಹೆಚ್ಚಿರುವ ಬಗ್ಗೆ ಯಾವುದೇ ಸೂಚನೆಗಳಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಝಪೋರಿಝ್ಯಾ ಮೇಲೆ ದಾಳಿ ಆರಂಭವಾಗುತ್ತಲೇ ಅಮೆರಿಕದ ಅಧ್ಯಕ್ಷ ಜೊ ಬೈಡನ್‌ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಫೋನ್‌ನಲ್ಲಿ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದರು.

ನಂತರ ಹೇಳಿಕೆ ನೀಡಿದ್ದ ಝೆಲೆನ್‌ಸ್ಕಿ ‘ಚರ್ನೋಬಿಲ್‌ ದುರಂತ ಮರುಕಳಿಸಬೇಕೆಂದು ರಷ್ಯಾ ಬಯಸುತ್ತಿದೆ. ಅದು ಅಣುಭಯೋತ್ಪಾದನೆ ನಡೆಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.