ADVERTISEMENT

ಆ ಮಹಾತಾಯಿ ಏಕಕಾಲದಲ್ಲಿ ಹತ್ತು ಮಕ್ಕಳಿಗೆ ಜನ್ಮ ನೀಡಿದ್ದ ಸುದ್ದಿ ಸುಳ್ಳು!

ಆಫ್ರಿಕಾದ 37 ವರ್ಷದ ಗೊಸಿಯಮೆ ಥಾಮರಾ ಸಿತೋಲ್‌ ಎಂಬ ಮಹಿಳೆ ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಳು ಎಂಬ ಸುದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 9:51 IST
Last Updated 24 ಜೂನ್ 2021, 9:51 IST
 ಗೊಸಿಯಮೆ ಥಾಮರಾ ಸಿತೋಲ್‌ ತನ್ನ ಗಂಡನೊಂದಿಗೆ ಇರುವ ಚಿತ್ರ
ಗೊಸಿಯಮೆ ಥಾಮರಾ ಸಿತೋಲ್‌ ತನ್ನ ಗಂಡನೊಂದಿಗೆ ಇರುವ ಚಿತ್ರ   

ಬೆಂಗಳೂರು: ಕಳೆದ ಎರಡು ವಾರದ ಹಿಂದೆ ಆಫ್ರಿಕಾದ 37 ವರ್ಷದ ಗೊಸಿಯಮೆ ಥಾಮರಾ ಸಿತೋಲ್‌ ಎಂಬ ಮಹಿಳೆಯೊಬ್ಬಳು ಏಕ ಕಾಲದಲ್ಲಿ ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂಬುದು ಜಾಗತಿಕ ಸುದ್ದಿಯಾಗಿತ್ತು.

ಆದರೆ, ಈ ಬಗ್ಗೆ ಇಂದು ‘ಬಿಬಿಸಿ‘ ಸುದ್ದಿ ವಾಹಿನಿ ವರದಿ ಪ್ರಕಟಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಮಹಿಳೆ ಹತ್ತು ಮಕ್ಕಳಿಗೆ ಜನ್ಮ ನೀಡಿರುವ ಸಂಗತಿ ಅಲ್ಲಿನಯಾವುದೇ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ ಎಂದು ಹೇಳಿದೆ.

‘ಗೌಟೆಂಗ್ ಪ್ರಾಂತ್ಯದಲ್ಲಿ ಮಹಿಳೆ ಹತ್ತು ಮಕ್ಕಳಿಗೆ ಜನ್ಮ ನೀಡಿರುವುದು ದಾಖಲಾಗಿಲ್ಲ. ಸಿತೋಲ್ ಇತ್ತೀಚೆಗೆ ಗರ್ಭಿಣಿಯಾಗಿರಲಿಲ್ಲ ಎಂಬುದನ್ನು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ‘ ಎಂದು ಗೌಟೆಂಗ್ ಪ್ರಾಂತೀಯ ಸರ್ಕಾರ ಹೇಳಿರುವುದಾಗಿ ವರದಿ ತಿಳಿಸಿದೆ.

ADVERTISEMENT

ಪ್ರಕರಣದಲ್ಲಿ ಹೆಸರು ಕೇಳಿ ಬಂದ ಮಹಿಳೆಯನ್ನು ಮಾನಸಿಕ ಆರೋಗ್ಯ ಕಾಯ್ದೆ ಅಡಿ ತಪಾಸಣೆಗೆ ಒಳಪಡಿಸಲಾಗಿದೆ ಎಂದುಪ್ರಾಂತೀಯ ಸರ್ಕಾರ ಹೇಳಿದೆ.

ಸಿತೋಲ್ ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಮೊದಲುಪ್ರಿಟೋರಿಯಾ ನ್ಯೂಸ್ ಜೂನ್ 8 ರಂದು ವರದಿ ಪ್ರಸಾರ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.